ಶಿವಮೊಗ್ಗ : ತಾಲ್ಲೂಕಿನ ಹರಮಘಟ್ಟದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯೊಂದನ್ನ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಹಿಡಿದಿದೆ.
ಕಳೆದ ಹದಿನೈದು ದಿನಗಳಿಂದ ಚಿರತೆಯು ಗ್ರಾಮದಲ್ಲಿ ಆತಂಕ ಮೂಡಿಸಿತ್ತು. ಪದೇಪದೇ ದಾಳಿ ನಡೆಸ್ತಿದ್ದ ಚಿರತೆ ಈಗಾಗಲೇ ಮೂರು ಹಸುಗಳನ್ನ ಕೊಂದಿತ್ತು. ಇನ್ನೂ ಈ ಘಟನೆಯಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರಿದ್ದರು.
ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಈ ಹಿನ್ನೆಲೆಯಲ್ಲಿ ಹರಮಘಟ್ಟದ ಊರಿನ ಬಳಿ ಬೋನ್ ಇಟ್ಟು ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಬೋನಿನಲ್ಲಿ ನಾಯಿಯೊಂದನ್ನ ಕಟ್ಟಿಹಾಕಿದ್ದರು. ನಿನ್ನೆ ರಾತ್ರಿ ಚಿರತೆ ಬೋನಿನ ಬಳಿಗೆ ಬಂದಿದ್ದು, ಅದರಲ್ಲಿ ಸೆರೆಯಾಗಿದೆ.
ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದು, ಅದನ್ನು ಕಾಡಿಗೆ ಬಿಡಲಿದ್ಧಾರೆ ಎಂದು ತಿಳಿದು ಬಂದಿದೆ.
ಚಾಲಕನ ಜೊತೆ ಮಕ್ಕಳನ್ನು ಕರೆದುಕೊಂಡು ಹೋದ ಮಹಿಳೆ/ ಪತ್ನಿ ಕೆಲಸಕ್ಕೆ ಕಣ್ಣೀರು ಹಾಕುತ್ತಿರುವ ಪತಿ
#ಶಿವಮೊಗ್ಗ : ತಾಲ್ಲೂಕಿನ ಹರಮಘಟ್ಟದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯೊಂದನ್ನ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಹಿಡಿದಿದೆ. pic.twitter.com/aDTM4Yakyu
— malenadutoday.com (@CMalenadutoday) December 2, 2022
