ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ, ನೀವೂ ಸಹಾಯ ಮಾಡಿ | ಕಿಚ್ಚ ಸುದೀಪ್‌ ಹೀಗಂದಿದ್ಯಾಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 1, 2025

ತನ್ನ ಅಬಿಮಾನಿಯೊಬ್ಬರ ಪುಟ್ಟಮಗುವಿಗೆ ಬಹು ಕೋಟಿ ವೆಚ್ಚದ ಚಿಕಿತ್ಸೆ ಅಗತ್ಯವಿದ್ದು, ಚಿಕಿತ್ಸೆ ಕೊಡಿಸಲು ಎಲ್ಲರು ನೆರವಾಗಿ ಎಂದು ನಟ ಕಿಚ್ಚ ಸುದೀಪ್‌ ತಮ್ಮ ಅಭಿಮಾನಿಗಳಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನಟ ಕಿಚ್ಚ ಸುದೀಪ ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಇದುವರೆಗೂ ಎಷ್ಟೂ ಜನರಿಗೆ ತಿಳಿಯದೆ ಸಹಾಯವನ್ನು ಸಹ ಮಾಡಿದ್ದಾರೆ. ಅದೇ ರೀತಿ ಇದೀಗ ಅಭಿಮಾನಿಯೊಬ್ಬರ ಪುಟ್ಟ ಮಗುವಿಗೆ ಅಪರೂಪದ ಖಾಯಿಲೆಯೊಂದು ಕಾಣಿಸಿಕೊಂಡಿದ್ದು, ಆ ಚಿಕಿತ್ಸೆಗೆ ಬೇಕಾಗುವ ಹಣಕ್ಕೆ ಸಹಾಯ ಮಾಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಕಿಚ್ಚ ಸುದೀಪ ಅಭಿಮಾನಿಗಳ ಗ್ರೂಪ್‌ನಲ್ಲಿ ಈ ವಿಡಿಯೋ ಬಿಡುಗಡೆಯಾಗಿದೆ.

ವಿಡಿಯೋದಲ್ಲಿರುವಂತೆ ಈ ವಿಡಿಯೋ ನೋಡುತ್ತಿರುವ ಎಲ್ಲರಿಗೂ ಕಿಚ್ಚನ ನಮಸ್ತೇ. ಈ ವಿಡಿಯೋ ಮಾಡೋಕೆ ಒಂದು ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ದ ಕಿಶೋರ್ ಮತ್ತು ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಕಿರಿಯ ಮಗಳು ಇದ್ದಾಳೆ, ಅವಳ ಹೆಸರು ಕೀರ್ತನಾ.

ಆ ಪುಟ್ಟ ಮಗಳಿಗೆ ಸ್ಪೈನ್ ಮ್ಯಾಸ್ಕ್ಯೂಲರ್ ಅಟ್ರೋಫಿ ಎಂಬ ಅಪರೂಪದ ಆರೋಗ್ಯ ಸಮಸ್ಯೆ ಇದೆ. ಬಹಳ ರೇರ್​ ಜೆನಟಿಕಲ್​ ಡಿಸಾರ್ಡರ್​​​ ಇದು” ಈ ಕಾಯಿಲೆಯನ್ನು ಗುಣ ಮಾಡಲು 16 ಕೋಟಿ ರೂಪಾಯಿಗಳಷ್ಟು ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಂದೆ ತಾಯಿ ಮಗುವಿಗೆ ಚಿಕಿತ್ಸೆ ಕೊಡಿಸಲು ತಮ್ಮ ಆಸ್ತಿಗಳನ್ನೆಲ್ಲಾ ಮಾರಲು ಹೊರಟಿದ್ದಾರೆ. ನಾನು ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನೀವು ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.



SUMMARY | Actor Kichcha Sudeep has appealed to his fans to help him get treatment.

KEYWORDS |  Actor, Kichcha Sudeep, help,  fans,  treatment,

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು