SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 11, 2025
ಶಂಕರ ಘಟ್ಟದ ನಮಿತಾ ಆರ್ ಶೆಟ್ಟಿ ಎಂಬುವವರು ಕುವೆಂಪು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪಿಎಚ್ ಡಿ ಪದವಿಯನ್ನು ಪಡೆದುಕೊಂಡಿದ್ದಾರೆ.ಇವರಿಗೆ ಇದೆ ತಿಂಗಳು 22 ರಂದು ನಡೆಯಲಿರುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರು ಪ್ರಮಾಣಪತ್ರ ನೀಡಲಿದ್ದಾರೆ
ಇವರು “ಡೆವಲಪ್‍ಮೆಂಟ್ ಆಫ್ ರಿವರ್ಸಿಬಲ್ ಡಾಟಾ ಹೈಡಿಂಗ್ ಟೆಕ್‍ನಿಕ್ಸ್ ಫಾರ್ ಡಿಜಿಟಲ್ ಇಮೇಜಸ್” ವಿಷಯದ ಕುರಿತು ಅಧ್ಯಯನ ನಡೆಸಿದ್ದರು. ಇವರು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ.ಯೋಗೀಶ್ ನಾಯಕ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.ಇವರು ಶಂಕರಘಟ್ಟದ ರೂಪ ರಮೇಶ್ ಶೆಟ್ಟಿ ದಂಪತಿಗಳ ಮಗಳಾಗಿದ್ದು, ಶಿವಮೊಗ್ಗದ ಕ್ಲಿಫ್ ಎಂಬೆಸ್ಸಿ ಮಾಲೀಕರಾದ ಆರ್.ರೋಹಿತ್‍ರವರ ಪತ್ನಿಯಾಗಿದ್ದಾರೆ.
SUMMARY | Namitha R Shetty, a native of Shankaraghatta, holds a PhD degree in Computer Science from Kuvempu University
KEYWORDS | Namitha R Shetty, Shankaraghatta, PhD degree,