SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 18, 2024
ಶಿವಮೊಗ್ಗ| ನಬಾರ್ಡ್ ರೈತರಿಗೆ ನೀಡುತ್ತಿದ್ದ ರೀ ಫೈನಾನ್ಸ್ ಸಾಲವನ್ನು ಕೇಂದ್ರ ಸರ್ಕಾರ ಶೇ 58 ರಷ್ಟು ಖಡಿತಗೊಳಿಸಿದ್ದು, ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಾದ ಕೆ ಟಿ ಗಂಗಾಧರ್ ಆಗ್ರಹಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರ ಕೃಷಿ ಉತ್ಪಾದನ ವೆಚ್ಚ ಹೆಚ್ಚಾಗಿರುವುದರಿಂದ ಅಡಮಾನ ರಹಿತ ಸಾಲವನ್ನು 1.6 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿದೆ. ನಮ್ಮ ರೈತರ ಸಮಸ್ಯೆಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಅರ್ಥವಾಗುತ್ತೆ ಆದರೆ ಮೋದಿಯವರಿಗೆ ಅರ್ಥವಾಗುತ್ತಿಲ್ಲ. ಈ ಹಿಂದೆ ಕೃಷಿ ಸಂಭಂದಿತ ವಲಯಗಳಿಗೆ ನಬಾರ್ಡ್ ರೀ ಫೈನಾನ್ಸ್ ಸಾಲವನ್ನು ನೀಡುತ್ತಿತ್ತು ಆ ಸಾಲವನ್ನು ಕ್ಲೈಂ ಮಾಡಿ ಡಿಸಿಸಿ ಬ್ಯಾಂಕ್ ಹಾಗೂ ಅಫೆಕ್ಸ್ ಬ್ಯಾಂಕ್ ಗಳು ರೈತರಿಗೆ ಸಾಲವನ್ನು ನೀಡುತ್ತಿದ್ದವು. ಆದರೆ ಈಗ ಸಾಲದ ಮಿತಿಯನ್ನು ಕೇಂದ್ರ ಸರ್ಕಾರ ಶೇ58 ರಷ್ಟು ಕಡಿತಗೊಳಿಸಿ ಅರ್ಧಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡಿದೆ. ಇದು ರೈತ ವಿರೋಧಿ ಸರ್ಕಾರವಾಗಿದೆ. ಇದು ಹೀಗೆ ಮುಂದುವರೆದರೆ ರೈತರು ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುತ್ತಾರೆ ಇದರಿಂದ ಸರ್ಕಾರಿ ಬ್ಯಾಂಕ್‌ಗಳಿಗೆ ಮುಜುಗರ ಉಂಟಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಕಡಿತ ಗೊಳಿಸಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದರು.
SUMMARY | The central government has reduced the refinance loans given by NABARD to farmers by 58 per cent, causing problems to farmers. K T Gangadhar, president of Karnataka Rajya Raitha Sangha and Hasiru Sena, demanded that the order be withdrawn immediately.
KEYWORDS | refinance loan central government, Rajya Raitha Sangha and Hasiru Sena, K T Gangadhar,