SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 16, 2024
ಶಿವಮೊಗ್ಗ | ನನ್ನ ಸಹೋದರ ಮಧುಬಂಗಾರಪ್ಪರನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸಚಿವರನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ದೀರ ದೀವರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈಡಿಗ ಸಮುದಾಯದ ಬೆಳವಣಿಗೆ ಹಾಗೂ ಅಭಿವೃದ್ಧಿಯ ವಿಚಾರದ ಬಗ್ಗೆ ಮಾತನಾಡ್ತಾ ಮಾಜಿ ಸಚಿವರು ಈ ಮಾತನ್ನು ಹೇಳಿದ್ದಾರೆ.
ಶಿವಮೊಗ್ಗದ ಈಡಿಗರ ಭವನದಲ್ಲಿ ನಿನ್ನೆ ದಿನ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಮಾರ್ ಬಂಗಾರಪ್ಪನವರು ಭಾಗವಹಿಸಿದರು, ಆ ವೇಳೆ ಮಾತನಾಡಿದ ಅವರು ರಾಜಕೀಯವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಎಸ್ ಎಂ ಕೃಷ್ಣರವರು ಸೇರಿದಂತೆ ಅನೇಕ ವ್ಯಕ್ತಿಗಳು ನಮ್ಮ ಸಮಾಜಕ್ಕೆ ಸಹಾಯವನ್ನು ಮಾಡಿದ್ದಾರೆ. ಇದರ ನಡುವೆ ನಮ್ಮ ಸಮಾಜದವರಾದ ಹಾಗೂ ನಮ್ಮ ಜಿಲ್ಲೆಯವರಾದ ನನ್ನ ಸಹೋದರನನ್ನು ಸರ್ಕಾರ ಮಂತ್ರಿಯನ್ನಾಗಿ ಮಾಡಿರುವುದು ನಮಗೆಲ್ಲಾ ಸಂತೋಷವನ್ನು ತಂದಿದೆ. ಅವರಿಂದ ನಮ್ಮ ಸಮಾಜಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಇನ್ನಷ್ಟು ಉತ್ತಮ ಸೇವೆ ಸಿಗಲಿ ಎಂದರು. ಅಲ್ಲದೆ ಅವರ ಅಧಿಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಹಾಗೂ ದೀವರ ಸಮಾಜಕ್ಕೆ ಹೊಸ ಹೊಸ ಅವಕಾಶಗಳು ಸಿಗಬೇಕು ಆ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
SUMMARY | Former minister Kumar Bangarappa said he was happy that his brother Madhu Bangarappa has been made a minister by the state government.
KEYWORDS | Kumar Bangarappa, Madhu Bangarappa, bjp, congress,