SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 7, 2024
ಶಿವಮೊಗ್ಗ | ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು, ನನ್ನ ಕ್ರಾಂತಿದೀಪ ಪತ್ರಿಕೆ ಎಂದು ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರಾದ ಎನ್ ಮಂಜುನಾಥ್ ಹೇಳಿದರು.
ಎನ್ ಮಂಜುನಾಥ ಅಭಿನಂದನಾ ಸಮಿತಿ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು, ನನ್ನ ಕ್ರಾಂತಿದೀಪ ಪತ್ರಿಕೆ. ಸುಮಾರು 40 ವರ್ಷಗಳಿಂದ ನನ್ನ ಪತ್ರಿಕೆಯನ್ನು ತೆಗೆದುಕೊಂಡು ಓದಿದ ಶಿವಮೊಗ್ಗದ ಜನತೆಗೆ ಧನ್ಯವಾದಗಳು ಎಂದರು. ಹಾಗೆಯೇ ನಾನು ಈ ಸ್ಥಾನಕ್ಕೆ ಬರಲು ಪ್ರಮುಖ ಕಾರಣಿಕರ್ತರು ಎಸ್ ಬಿ ರಾಮಪ್ಪ ಹಾಗೂ ಅವರ ಶ್ರೀಮತಿ ಕಮಲ ರವರು. ಎಸ್ ಬಿ ರಾಮಪ್ಪ ರೊಡನೆ ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ಕಾರಣಾಂತರಗಳಿಂದ ಅವರು ಪತ್ರಿಕೆಯನ್ನು ನಡೆಸಲಾಗಲಿಲ್ಲ ಆ ಸಂದರ್ಭದಲ್ಲಿ ಅವರ ಶ್ರೀಮತಿ ಕಮಲಾ ರವರು ಆ ಪತ್ರಿಕೆಯನ್ನು ನೀನು ನಡೆಸು ಎಂದು ನನಗೆ ಬಿಟ್ಟುಕೊಟ್ಟರು. ಅಂದಿನಿಂದ ಇದುವರೆಗೆ ಸುದೀರ್ಘ 40 ವರ್ಷಗಳ ಕಾಲ ಕ್ರಾಂತಿದೀಪ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದೇನೆ. ಇಂದು 8 ಜಿಲ್ಲೆಯಲ್ಲಿ ನಮ್ಮ ಪೇಪರ್ ಚಾಲ್ತಿಯಲ್ಲಿದೆ ಎಂದರು.
ಎನ್ ಮಂಜುನಾಥ್ ರಿಗೆ ಸಿಕ್ಕ ಪ್ರಶಸ್ತಿ ನನಗೆ ಸಿಕ್ಕಷ್ಟೇ ಸಂತೋಷ ನೀಡಿದೆ | ನಂಜುಂಡೇಗೌಡ್ರು
ಇತ್ತೀಚಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಹತೆ ಇಲ್ಲದೆವರಿಗೆ ನೀಡಿ ಪ್ರಶಸ್ತಿಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಆದರೆ ಎನ್ ಮಂಜುನಾಥ್ ರವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ಸಿಕ್ಕಿರುವುದರಿಂದಾಗಿ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ ಎಂದು ಹಿರಿಯ ಪತ್ರಕರ್ತರಾದ ನಂಜುಂಡೇ ಗೌಡ್ರು ತಿಳಿಸಿದರು. ಹಾಗೆಯೇ ಎನ್ ಮಂಜುನಾಥ್ ರಿಗೆ ಸಿಕ್ಕ ಪ್ರಶಸ್ತಿ ನನಗೆ ಸಿಕ್ಕಷ್ಟೇ ಸಂತೋಷವಾಗಿದೆ ಎಂದರು.
ಪ್ರಸ್ತುತ ಪತ್ರಿಕೆಗಳು ಜಾಹೀರಾತಿನ ಹಿಂದೆ ಹೆಚ್ಚಾಗಿ ಹೋಗುತ್ತವೆ. ಹಾಗೆ ರಾಜಕಾರಣಿಗಳ ಹುಟ್ಟುಹಬ್ಬದ ಜಾಹೀರಾತು ಹಾಕಲು ಸಾವಿರಾರು ರೂಪಾಯಿ ಚಾರ್ಜ್ ಮಾಡುತ್ತವೆ ಅದು ತಪ್ಪಾಗುತ್ತದೆ. ಏಕೆಂದರೆ ಮುಂದೆ ರಾಜಕಾರಣಿಗಳ ಬಗ್ಗೆ ಸುದ್ದಿ ಬರೆದಾಗ ನನ್ನ ಹುಟ್ಟುಹಬ್ಬದ ಜಾಹೀರಾತು ನೀಡಲು ಹಣ ತೆಗೆದುಕೊಂಡು ಹೋಗಿ ನನ್ನ ಬಗ್ಗೆ ಬರೆಯುತ್ತೀರ ಎಂದು ಕೇಳುತ್ತಾರೆ. ಇದರಿಂದಾಗಿ ಪತ್ರಿಕಾ ಸ್ವಾತಂತ್ರದ ಮೇಲೆ ಹೊಡೆತ ಬೀಳುವುದು ಎಂದರು.
ಯುವಕರು ಹೆಚ್ಚಾಗಿ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು | ಎಂ ಶ್ರೀಕಾಂತ್
ಎನ್ ಮಂಜುನಾಥ್ ರವರು ತಪ್ಪು ಮಾಡಿದರೆ ತಪ್ಪು ಎಂದು ನೇರವಾಗಿ ಹೇಳುವ ವ್ಯಕ್ತಿ. ಹಾಗೆಯೇ ಬಡವರ ಪರವಾಗಿ ಸದಾ ನಿಲ್ಲುವ ವ್ಯಕ್ತಿ ಎಂದು ಎಂ ಶ್ರೀಕಾಂತ್ ಹೇಳಿದರು. ಹಾಗೆಯೇ ಪ್ರಸ್ತುತ ಕೇರಳ ಭಾಗದಲ್ಲಿ ಹೆಚ್ಚು ಲಾರಿ ಡ್ರೈವರ್ಸ್ ಹಾಗೂ ಹಮಾಲಿ ಕೆಲಸ ಮಾಡುವವರು ಸಹ ದಿನಾ ಪೇಪರ್ ಒದುತ್ತಾರೆ, ಆದರೆ ನಮ್ಮಕರ್ನಾಟಕದಲ್ಲಿ ಯುವಕರು ಪೇಪರ್ ಗಿಂತ ಹೆಚ್ಚಾಗಿ ಮೊಬೈಲ್ ನೋಡುತ್ತಾರೆ. ಇಂದಿನ ಯುವಕರು ಹೆಚ್ಚಾಗಿ ಪೇಪರ್ ಓದಬೇಕು ಎಂದರು.
ಯಾವುದೇ ಅಪಸ್ವರ ಇಲ್ಲದೇ ಎಲ್ಲಾ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಇದು ಎನ್ ಮಂಜುನಾಥ್ ರವರು ಗಳಿಸಿರುವ ಹೆಸರು| ಸುಂದರ್ ರಾಜ್ ಎನ್ ಮಂಜುನಾತೆ ಅಭಿನಂದನಾ ಸಮಿತಿ ಅಧ್ಯಕ್ಷರು
ಎನ್ ಮಂಜುನಾಥ್ ರವರು ಮೊಹರೆ ಹಣಮಂತರಾಯ ಪ್ರಶಸ್ತಿ ಪಡೆದಿರುವ ಹಿನ್ನಲೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ವಿಚಾರವನ್ನು ಎಲ್ಲಾ ಪತ್ರಕರ್ತರಿಗೂ ತಿಳಿಸಿದಾಗ ಯಾವುದೇ ಅಪಸ್ವರ ಇಲ್ಲದೆ ಎಲ್ಲಾ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಇದು ಎನ್ ಮಂಜುನಾಥ್ ರವರು ಗಳಿಸಿರುವ ಹೆಸರು. ಹಾಗೆಯೇ ಎನ್ ಮಂಜುನಾಥ್ ರವರ ಬಗ್ಗೆ ಅನೇಕ ಪತ್ರಕರ್ತರು ಲೇಖನವನ್ನು ಬರೆದು ಕೊಟ್ಟಿದ್ದಾರೆ. ಆ ಲೇಖನಗಳಲ್ಲಿ ಮಂಜುನಾಥ್ ರವರು ಪಡೆದ ಕಷ್ಟಗಳ ಬಗ್ಗೆ ತಿಳಿಸಲಾಗಿದೆ ಎಂದರು
ಈ ಸಂದರ್ಭದಲ್ಲಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗದ ಕಾರಣ ಎಂ ಶ್ರೀಕಾಂತ್ ರವರು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. ನಂತರ ಶಾಲು ಹೊದಿಸಿ ಹಾರ ಹಾಕುವ ಮೂಲಕ ಎನ್ ಮಂಜುನಾಥ್ ರವರಿಗೆ ಸನ್ಮಾನ ಮಾಡಲಾಯಿತು. ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು.
SUMMARY | N Manjunath, editor-in-chief of Krantideepa, said, “It was my Krantideepa magazine that lit up my life.
KEYWORDS | N Manjunath, editor-in-chief of Krantideepa, shiv̧amoogga, kannadanews,