SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 19, 2024
ಸದ್ಯ ನಟ ದರ್ಶನ್ರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿರಿಲೀಸ್ ಆಗುತ್ತಿದೆ. ಇದೀಗ ಅದರ ಸಾಲಿಗೆ ಸಂಗೊಳ್ಳಿ ರಾಯಣ್ಣ ಸಿನಿಮಾ ಕೂಡ ಸೇರಿಕೊಂಡಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ನವಗ್ರಹ ಸಿನಿಮಾ ಕಳೆದ ನವಂಬರ್ 8 ರಂದು ರೀರಿಲೀಸ್ ಆಗಿತ್ತು. ಇದೀಗ ದರ್ಶನ್ ನಟನೆಯ ಐತಿಹಾಸಿಕ ಚಿತ್ರವಾದ ಸಂಗೊಳ್ಳಿ ರಾಯಣ್ಣ ಚಿತ್ರ ನವೆಂಬರ್ 22 ರೀರೀಲೀಸ್ ಆಗಲಿದೆ.

12 ವರ್ಷಗಳ ಹಿಂದೆ ಸಂಗೊಳ್ಳಿ ರಾಯಣ್ಣ ಸಿನಿಮಾ ರಿಲೀಸ್ ಆಗಿತ್ತು, ಈ ಚಿತ್ರದಲ್ಲಿ ನಟ ದರ್ಶನ್ ಸಂಗೊಳ್ಳಿ ರಾಯಣ್ಣನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
ಬಹುಕೋಟಿ ವೆಚ್ಚದ ಈ ಚಿತ್ರಕ್ಕೆ ಆನಂದ್ ಅಪ್ಪುಗೋಳ್ ಬಂಡವಾಳ ಹಾಕಿದ್ದರು.ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ಧರು. ಅಂದಿನ ಕಾಲಕ್ಕೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 30 ಕೋಟಿ ರೂ ಹಣವನ್ನು ಕಲೆಕ್ಷನ್ ಮಾಡಿತ್ತು
ಸದ್ಯ ಈ ಚಿತ್ರವನ್ನು ಎಸ್.ಜಿ.ಕೆ. ಫಿಲಂಸ್ ಮೂಲಕ ಕೆ.ಬಸವರಾಜ್ ಮತ್ತೆ ರೀರಿಲೀಸ್ ಮಾಡುತ್ತಿದ್ದಾರೆ. ನವಂಬರ್ 22 ರಂದು ಈ ಚಿತ್ರ ರಾಜ್ಯದಾದ್ಯಂತ ರಿಲೀಸ್ ಆಗಲಿದ್ದು, ಈ ಚಿತ್ರದ ಮರು ಬಿಡುಗಡೆ ದರ್ಶನ್ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ,
SUMMARY| Darshan’s historical film Sangolli Rayanna will be re-released on 22 November.
KEYWORDS| Darshan, dboss, sangolirayanna, kannadamovies,