SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 5, 2025
ಬೆಂಗಳೂರು | ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್‌ರವರ ಕಾರು ಮತ್ತು ಗೂಡ್ಸ್ ವಾಹನದ ನಡುವೆ ಡಿಕ್ಕಿಯಾಗಿದೆ. ಈ ಹಿನ್ನಲೆ ದ್ರಾವಿಡ್ ಹಾಗೂ ಆಟೋ ಚಾಲಕನ ನಡುವೆ ಸಣ್ಣ ವಾಗ್ವಾದ ನಡೆದಿದ್ದು, ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Rahul Dravid’s Car touches a goods auto on Cunningham Road Bengaluru #RahulDravid #Bangalore pic.twitter.com/AH7eA1nc4g
— Spandan Kaniyar ಸ್ಪಂದನ್ ಕಣಿಯಾರ್ (@kaniyar_spandan) February 4, 2025
ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹಿನ್ನಲೆ ರಾಹುಲ್ ದ್ರಾವಿಡ್‌ರವರು ಕಾರನ್ನು ನಿಲ್ಲಿಸಿದ್ದರು. ಆ ವೇಳೆ ಆಟೋ ಚಾಲಕನೊಬ್ಬ ಹಿಂಬದಿಯಿಂದ ರಾಹುಲ್ ದ್ರಾವಿಡ್‌ರವರ ಕಾರಿಗೆ ಬಂದು ಗುದ್ದಿದ್ದಾನೆ. ಆಗ ತಕ್ಷಣ ರಾಹುಲ್ ದ್ರಾವಿಡ್ ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸಿದ್ದಾರೆ. ನಂತರ ಚಾಲಕನೊಡನೆ ಮಾತಿಗಿಳಿದಿದ್ದಾರೆ. ಇ ವೇಳೆ ಇಬ್ಬರ ನಡುವೆ ಸಣ್ಣ ವಾಗ್ವಾದ ನಡೆದಿದೆ. ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಪೊಲೀಸ್ ಠಾಣೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಸದಾ ಸೌಮ್ಯ ಸ್ವಭಾವದಿಂದ ಗುರುತಿಸಿಕೊಳ್ಳುತ್ತಿದ್ದ ರಾಹುಲ್ ದ್ರಾವಿಡ್ ಈ ವಿಷಯದಲ್ಲೂ ಸಹ ಎಲ್ಲೂ ರೇಗಾಡದೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
SUMMARY | Former India cricketer and coach Rahul Dravid’s car was hit by a goods vehicle on Cunningham Road in Cunningham Road.
KEYWORDS | India cricketer, Rahul Dravid, Cunningham Road, car,