ಬೆಂಗಳೂರು| ಈ ಹಿಂದೆ ನಟ ದುನಿಯಾ ವಿಜಯ್ ಜೈಲಿನಿಂದ ಬಿಡಿಸಿದ್ದ ಆರೋಪಿಯೊಬ್ಬ ಮತ್ತೆ ಡಬಲ್ ಮರ್ಡರ್ ಕೇಸ್‌ನಲ್ಲಿ ಸಿಲುಕಿ ಜೈಲು ಪಾಲಾಗಿದ್ದಾನೆ.
ಏನಿದು ಪ್ರಕರಣ.?
ಈ ಹಿಂದೆ ಕೊಲೆ ಹಾಗೂ ರೇಪ್ ಕೇಸ್‌ನಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದ ಸುರೇಶ್ ಎಂಬಾತನನ್ನ ದುನಿಯಾ ವಿಜಿ ರಿಲೀಸ್ ಮಾಡಿಸಿದ್ದರು. ಶಿಕ್ಷೆ ಅನುಭವಿಸಿದ್ದರು ಸಹ ಶಿಕ್ಷೆಯ ಜೊತೆಗೆ ವಿಧಿಸಿದ್ದ ದಂಡ ಕಟ್ಟಲಾಗದೇ ಜೈಲಿನಲ್ಲಿಯೇ ಉಳಿದುಕೊಂಡಿದ್ದ ಹಲವರನ್ನ ದುನಿಯಾ ವಿಜಿ ಅಪರಾಧಿಗಳ ದಂಡವನ್ನು ಕಟ್ಟಿ ರಿಲೀಸ್ ಮಾಡಿಸಿದ್ದರು. ಅವರ ಒಳ್ಳೆಯ ಕೆಲಸ ಆ ಸಂದರ್ಭದಲ್ಲಿ ಜನರಿಂದ ಶ್ಲಾಘನೆಗೆ ಒಳಗಾಗಿತ್ತು.
ಇನ್ನೂ ಸುರೇಶ್ ಕೂಡ ಜೈಲಿನಿಂದ ಬಿಡುಗಡೆಯಾಗಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡುತ್ತಾ ಜೀವನ ಸಾಗಿಸ್ತಿದ್ದ. ಆದರೆ ಈತನ ಬದುಕಿಗೆ ಜೈಲು ಶಿಕ್ಷೆಯೇ ಮುಳುವಾಗಿತ್ತು. ಈತನನ್ನ ಇಬ್ಬರು ವ್ಯಕ್ತಿಗಳು ಕಳ್ಳ, ಕೊಲೆಗಾರ ಎಂದು ನಿಂದಿಸುತ್ತಿದ್ದರಂತೆ. ಅದೇ ಕಾರಣಕ್ಕೆ ಗಲಾಟೆಯಾಗಿ ಸುರೇಶ್ ಅವರಿಬ್ಬರನ್ನ ಕೊಲೆ ಮಾಡಿದ್ದ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಆತ ಮತ್ತೆ ಜೈಲು ಪಾಲಾಗಿದ್ದಾನೆ.