SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 12, 2024
ಶಿವಮೊಗ್ಗದವರಾದ ಶಿವಮೊಗ್ಗದ ಹೆಸರನ್ನ ತಮ್ಮ ಹೆಸರಿನಲ್ಲಿಯೇ ಇಟ್ಟುಕೊಂಡು ಭೀಮಾ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ರಘು ಶಿವಮೊಗ್ಗ ಇದೀಗ ಮತ್ತೊಂದು ಸಿನಿಮಾದ ನಿರ್ದೇಶನಕ್ಕೆ ಇಳಿದಿದ್ದಾರೆ.
ಚೂರಿ ಕಟ್ಟೆ ಸಿನಿಮಾ ಖ್ಯಾತಿಯ ರಘು ಶಿವಮೊಗ್ಗ ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ದಿ ಟಾಸ್ಕ್ ಎಂಬ ಟೈಟಲ್ ನೀಡಿದ್ದಾರೆ.
ಸಿನಿಮಾದ ಮುಹೂರ್ತ ಸೋಮವಾರ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ನೆರವೇರಿತು. ರಘು ಶಿವಮೊಗ್ಗ ನಿರ್ದೇಶನದ ಮೂರನೆ ಸಿನಿಮಾ ಇದಾಗಿದ್ದು, ಈ ಹಿಂದೆ ರಘು ಪೆಂಗ್ಟಾನ್ ಹಾಗೂ ಚೂರಿಕಟ್ಟೆ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ದಿ ಟಾಸ್ಕ್ ನೈಜ ಘಟನೆ ಆಧರಿತ ಸಿನಿಮಾ.
ಈ ಸಿನಿಮಾದ ಕುರಿತು ಮಾತನಾಡಿದ ರಘು ಶಿವಮೊಗ್ಗ ಇದೊಂದು ನೈಜ ಘಟನೆ ಆಧರಿತ ಸಿನಿಮಾ ಎಂದಿದ್ದಾರೆ. ಸಿನಿಮಾದಲ್ಲಿ ಪೆಂಟಗನ್ ಸಿನಿಮಾದಲ್ಲಿ ಹಿರೋ ಆಗಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮಾ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು, ಅಚ್ಯುತ್ ಕುಮಾರ್ ಗೋಪಾಲ್ ಕೃಷ್ಣ ದೇಶಪಾಂಡೆ ಹರಿಣಿ ಸ್ರೀಕಾಂತ್ ಇನ್ನಿತರರು ನಟಿಸುತ್ತಿದ್ದಾರೆ. ಹೆಸರಾಂತ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಈ ಸಿನಿಮಾಗೆ ಬಡವಾಳ ಹೂಡಲಿದ್ದಾರೆ.