SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 13, 2024
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ದರ್ಶನ್ ಪವಿತ್ರ ಗೌಡ ಸೇರಿದಂತೆ 7 ಜನರಿಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ದರ್ಶನ್ ಪರ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರು, ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ರವರ ಪಾತ್ರವಿಲ್ಲ ಎಂದು ವಾದಿಸಿದ್ದರು. ಪೊಲೀಸರು ಕೆಲವು ಉತ್ಪ್ರೇಕ್ಷಿತ ಆರೋಪಗಳನ್ನು ದರ್ಶನ್ ವಿರುದ್ಧ ಮಾಡಿದ್ದಾರೆ ಎಂದು ವಾದಿಸಿದ್ದರು.

ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರು ದರ್ಶನ್ ಸೇರದಂತೆ 7 ಜನರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್ ಗೌಡ, ಪ್ರದೋಶ್, ಅನುಕುಮಾರ್, ಜಗದೀಶ್, ನಾಗರಾಜು ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಆರೋಪಿಗಳಿಗೆ ಕೋರ್ಟ್ ಹಾಕಿರುವ ಷರತ್ತುಗಳೇನು
ಆರೋಪಿಗಳು ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಬಾರದು, ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು, ಆರೋಪಿಗಳಿಗೆ ತಲಾ ಇಬ್ಬರು ಶೂರಿಟಿ ನೀಡಬೇಕು, ಸಾಕ್ಷಿಗಳಿಗೆ ಬೆದರಿಗೆ ಹಾಕಬಾರದು, ಸೇರಿದಂತೆ ಪ್ರಮುಖ ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಿದ್ದಾರೆ.
SUMMARY | The High Court has granted conditional bail to seven persons, including Darshan Pavithra Gowda, accused in the Renuka Swamy murder case.
KEYWORDS | High Court, conditional bail, Darshan, Pavithra Gowda,