SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 6, 2024
ಪುಷ್ಪ 2 ಚಿತ್ರ ವೀಕ್ಷಿಸಲು ತೆರಳಿದ್ದ ಮಹಿಳೆ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದು, ಆ ಮಹಿಳೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಪುಷ್ಪ 2 ಚಿತ್ರತಂಡ ಘೋಷಿಸಿದೆ.
ಹೈದರಾಬಾದ್ ನ ಥಿಯೇಟರ್ ಒಂದರಲ್ಲಿ ರೇವತಿ ಹಾಗೂ ಅವರ ಕುಟುಂಬ ಸಿನಿಮಾ ಪುಷ್ಪ 2 ವೀಕ್ಷಣೆಗೆ ತೆರಳಿದ್ದರು. ಆ ವೇಳೆ ಅಲ್ಲಿ ಜನಸಂದಣಿ ಹೆಚ್ಚಿದ್ದ ಕಾರಣ ರೇವತಿ ಎಂಬ 39 ವರ್ಷದ ಮಹಿಳೆ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರು. ಹಾಗೆಯೇ ಆಕೆಯ ಮಗ ಶ್ರೀತೇಜ್ ಎಂಬಾತನು ಸಹ ತೀವ್ರ ಗಾಯಗೊಂಡಿದ್ದು, ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ದುರಂತಕ್ಕೆ ಅಲ್ಲೂ ಅರ್ಜುನ್ ಪ್ರತಿಕ್ರಿಯೆ ನೀಡಿದ್ದು, ಈ ದುರಂತ ದುರಾದೃಷ್ಟಕರ ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆ ಕುಟುಂಬಕ್ಕೆ ಬೇಕಾದ ಅಗತ್ಯ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.ಗಾಯಗೊಂಡ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಶ್ರೀತೇಜ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ನಂತರ ಈ ಬಗ್ಗೆ ಟ್ವೀಟ್ ಮಾಡಿದ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಈ ದುರಂತ ಸಂಭವಿಸಿರುವುದು ನಮಗೆ ತೀವ್ರ ದುಃಖ ತಂದಿದೆ. ನಮ್ಮ ಪ್ರಾರ್ಥನೆ ಆ ಕುಟುಂಬ ಮತ್ತು ಚಿಕಿತ್ಸೆಗೊಳಗಾಗಿರುವ ಚಿಕ್ಕ ಮಗುವಿನೊಂದಿಗಿದೆ. ಈ ಕಠಿಣ ಸಂದರ್ಭದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದಾರೆ.
SUMMARY| The makers of Pushpa 2 have announced financial assistance to the family of a woman who died in a stampede while watching the film.
KEYWORDS | Pushpa 2, woman died, hyderabad, filmy news,