SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 29, 2025
ಧರ್ಮ ಕೀರ್ತಿರಾಜ್ ನಾಯಕನಟನಾಗಿ ಅಭಿನಯಿಸಿರುವ ತಲ್ವಾರ್ ಚಿತ್ರದ ಟ್ರೈಲರ್ ಸರಿಗಮಪ ಯುಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
ಈ ಹಿಂದೆ ಹೆಚ್ಚಾಗಿ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಧರ್ಮ ಇದೀಗ ಮೊದಲ ಬಾರಿಗೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿರುವಂತೆ ರಗಡ್ ರೌಡಿಸಂನೊಂದಿಗೆ ಒಂದು ಲವ್ ಸ್ಟೋರಿ, ಖಡಕ್ ಡೈಲಾಗ್ಸ್ ಮತ್ತು ಬ್ಯಾಗ್ರೌಂಡ್ ಮ್ಯೂಸಿಕ್, ಹಾಗೂ ಧರ್ಮ ಕೀರ್ತಿರಾಜ್‌ರವರ ಯಾಕ್ಟಿಂಗ್ ಇವೆಲ್ಚಿಲವೂ ಸಹ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಮಮ್ತಾಜ್ ಮುರುಳಿ ಈ ಚಿತ್ರವನ್ನು ನಿರ್ದೇಶಿಸಿದ್ದು,ಶರತ್ ಲೋಹಿತಾಶ್ವ, ಜೆಕೆ, ಅವಿನಾಶ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಫೆಬ್ರವರಿ 7 ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗಲಿದೆ.
SUMMARY | The trailer of Dharma Keerthiraj starrer Talvar has been released on Saregamapa YouTube channel.
KEYWORDS | Dharma, Keerthiraj, Talvar, trailer,