SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 24, 2024
ಶಿವಮೊಗ್ಗ | ಕರ್ನಾಟಕ ರಾಜ್ಯಮಟ್ಟದ ಹಾಗು ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಶಿವಮೊಗ್ಗ ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘ ಇವರ ವತಿಯಿಂದ ಡಿ. 27 ರಂದು ತರೀಕೆರೆಯ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ದೇಹದಾರ್ಢ್ಯ ಪಟುಗಳ ಸಂಘದ ಕಾರ್ಯದರ್ಶಿ ಯೋಗೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಕರ್ನಾಟಕ ರಾಜ್ಯಮಟ್ಟದ ಹಾಗು ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಫರ್ಧೆಯನ್ನು ತರಿಕೆರೆಯಲ್ಲಿ ನಡೆಸುತ್ತಿದ್ದೇವೆ. ಈ 55 ರಿಂದ 90 ಕೆ ಜಿ ಒಳಗಿನ ದೇಹ ದಾರ್ಡ್ಯ ಸ್ಪರ್ದೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧಿಗಳು ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಸ್ಫರ್ಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯದಾದ್ಯಂತ ಸ್ಪರ್ಧಿಗಳಿಗೆ ಅವಕಾಶವಿರುತ್ತದೆ ಎಂದರು. ಇಲ್ಲಿ ಭಾಗವಹಿಸುವ ಜಿಲ್ಲಾ ಮಟ್ಟದ ಸ್ಪರ್ಧಿಗಳಿಗೆ 200 ರೂ ಪ್ರವೇಶದರವನ್ನು ನಿಗದಿ ಪಡಿಸಿದ್ದು, ರಾಜ್ಯಮಟ್ಟದ ಸ್ಪರ್ಧಿಗಳಿಗೆ 300 ರೂಪಾಯಿಯನ್ನು ನಿಗದಿ ಪಡಿಸಿದ್ದೇವೆ ಸ್ಫರ್ಧಿಗಳು ಸ್ಪರ್ಧೆಗೆ ಭಾಗವಹಿಸುವಾಗ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದರು.
ವಿಜೇತ ಸ್ಫರ್ಧಿಗಳಿಗೆ ಸಿಗುವ ಬಹುಮಾನದ ಮೊತ್ತವೆಷ್ಟು
ಈ ದೇಹದಾರ್ಢ್ಯ ಸ್ಪರ್ಧೆಯಲ್ಲಿ 8 ವಿಭಾಗಗಳನ್ನು ಮಾಡಲಾಗುತ್ತದೆ. ಪ್ರತಿ ವಿಭಾಗದಲ್ಲಿ ಉತ್ತಮವಾಗಿ ಸ್ಫರ್ಧಿಸಿದ 5 ಜನರಿಗೆ ಬಹುಮಾನವನ್ನು ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಪ್ರಥವ ಸ್ಥಾನವನ್ನು ಪಡೆದವರಿಗೆ ಪ್ರಥಮ ಬಹುಮಾನವಾಗಿ 8 ಸಾವಿರ ರೂಪಾಯಿಗಳನ್ನು ನಿಗದಿಪಡಿಸಿದ್ದಾರೆ. ಹಾಗೆಯೇ ದ್ವಿತೀಯ ಸ್ಥಾನ ಪಡೆದವರಿಗೆ 5 ಸಾವಿರ ತೃತೀಯ 3 ಸಾವಿರ ನಾಲ್ಕನೇ ಸ್ಥಾನ 2 ಸಾವಿರ ಹಾಗೂ 5 ನೇ ಸ್ಥಾನ ಪಡೆದವರಿಗೆ 1500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ 8 ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸ್ಫರ್ಧಿಗಳು ರಾಜ್ಯ ಮಟ್ಟದ ದೇಹ ದಾರ್ಡ್ಯ ಸ್ಫರ್ಧೆಗೆ ಆಯ್ಕೆಯಾಗಲಿದ್ದಾರೆ ಎಂದರು.
ರಾಜ್ಯ ಮಟ್ಟದಲ್ಲಿ ಬಹುಮಾನದ ಮೊತ್ತ ಹೆಚ್ಚಿರಲಿದ್ದು ಇಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 20 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಹಾಗೆಯೇ ದ್ವಿತೀಯ 15 ಸಾವಿರ ತೃತೀಯ 10 ಸಾವಿರವನ್ನು ನಿಗದಿಪಡಿಸಿದ್ದು, ಇಲ್ಲಿ ಬೆಸ್ಟ್ ಪೋಸರ್ ಎಂಬ ಬಹುಮಾನವನ್ನು ಸಹ ನೀಡಲಾಗುತ್ತದೆ ಈ ಬಹುಮಾನದ ಮೊತ್ತ 5 ಸಾವಿರ ರೂಪಾಯಿಗಳು ಇರಲಿದೆ ಎಂದರು.
SUMMARY | The Karnataka State Level and District Level Bodybuilding Competition was organized by Shivamogga District Bodybuilders Association. The event will be held on The 27th at the in Tarikere
KEYWORDS | Tarikere, Bodybuilders Association, State Level and District Level Bodybuilding,