SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 17, 2024
ಕೃಷಿ ಹೊಂಡಕ್ಕೆ ಸ್ಫೋಟಕವನ್ನು ಎಸೆದಿರುವ ಕೇಸ್‌ಗೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ಗೆ ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಏನಿದು ಪ್ರಕರಣ
ಈ ಹಿಂದೆ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಎಂಬ ಕೆಮಿಕಲ್‌ನ್ನು ಮಿಕ್ಸ್ ಮಾಡಿ ಅದನ್ನು ಕೃಷಿ ಹೊಂಡಕ್ಕೆ ಹಾಕಿ ಸ್ಪೋಟಿಸಿದ್ದರು. ಅಷ್ಟೇ ಅಲ್ಲದೆ ಆ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಹಿನ್ನಲೆ ಪೊಲೀಸರು ಪ್ರತಾಪ್ ರನ್ನು ಬಂಧಿಸಿ 3 ದಿನಗಳ ಕಾಲ ವಿಚಾರಣೆ ನಡೆಸಿದ್ದರು. ನಿನ್ನೆ ಪ್ರತಾಪ್‌ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಹಿನ್ನಲೆ ಮಧುಗಿರಿ ಜೆಎಂಎಫ್‌ಸಿ ಕೋರ್ಟ್ ಡ್ರೋನ್ ಪ್ರತಾಪ್ ರಿಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಹಾಗೆಯೇ ವಿಡಿಯೋ ಚಿತ್ರೀಕರಣ ಮಾಡಿದ್ದ ವಿನಯ್, ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಅವರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
SUMMARY | Pratap was remanded to judicial custody for 10 days by a court in connection with a case of throwing explosives into an agricultural pond.
KEYWORDS | drone Pratap, judicial custody, throwing explosives kannada news,