SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 13, 2024
ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪತ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಡ್ರೋನ್ ಪ್ರತಾಪ್ ಮೇಲೆ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಡ್ರೋನ್ ಪ್ರತಾಪ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋವೊಂದು ಅವರ ಬಂಧನಕ್ಕೆ ಕಾರಣವಾಗಿದೆ.
ಈ ಹಿಂದೆ ಡ್ರೋನ್ ಪ್ರತಾಪ್ ರವರು ಕೆಮಿಕಲ್ ಬಳಸಿ ಸ್ಪೋಟಕವೊಂದನ್ನು ರೆಡಿಮಾಡಿದ್ದರು.ಅಷ್ಟೆ ಅಲ್ಲದೆ ಆ ಸ್ಫೋಟಕವನ್ನು ಕೃಷಿ ಹೊಂಡದ ನೀರಿನ ಮೇಲೆ ಎಸೆದು ಅದನ್ನು ಸ್ಫೋಟಿಸಿದ್ದರು. ಆ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ಸಂಭ್ರಮಿಸಿದರು ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಸ್ಪೋಟಕ ಸಿಡಿಸಿದ ಹಿನ್ನಲೆ ಡ್ರೋನ್ ಪ್ರತಾಪ್ ವಿರುದ್ಧ ಮಧುಗಿರಿ ಮಿಡಿಗೇಶಿ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಡ್ರೋನ್ ಪ್ರತಾಪ್‌ರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
SUMMARY | Bigg Boss fame Drone Pratap is facing another trouble. A case has been registered against Drone Pratap and the police have arrested him.
KEYWORDS | Bigg Boss fame, Drone Pratap, arrest, kannadanews,