SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 26, 2024
ಶಿವಮೊಗ್ಗ | ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಸ್ಥಾಪಕರ ದಿನಾಚರಣೆಯನ್ನು ಡಿ. 28 ರಂದು ಸಂಘದ ಶಾಂತಲಾ ಸಭಾಂಗಣದಲ್ಲಿ ಸಂಜೆ 4:30 ಕ್ಕೆ ನಡೆಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ ಗೋಪಿನಾಥ್ ತಿಳಿಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಸಂಸ್ಥಾಪಕರ ದಿನಾಚರಣೆಯನ್ನು ನಾವು ಪ್ರತಿ ವರ್ಷದಂತೆ ಈ ವರ್ಷವು ಸಹ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷರಾದ ಎಂಜಿ ಬಾಲಕೃಷ್ಣರವರು ಆಗಮಿಸುತ್ತಾರೆ ಕಾರ್ಯಕ್ರಮದ ಅಧ್ಯಕ್ತೆಯನ್ನು ನಾನು (ಬಿ ಗೋಪಿನಾಥ್) ವಹಿಸಿರುತ್ತೇನೆ ಎಂದರು.


ಹಾಗೆಯೇ ಸಂಘದ ಸ್ಥಾಪನೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮತ್ತು ಸಂಘವನ್ನು ಅಭಿವೃದ್ದಿ ಪಥದಲ್ಲಿ ಸಾಗಿಸಲು ಶ್ರಮ ವಹಿಸಿದ ಮಾನಸ ವೆಟ್ ಪಾರ್ಮಾ, ಕನ್ನಿಕಾ ಟ್ರೇಡರ್ಸ್, ಶಾಸ್ತ್ರಿ ಆಟೋಮೊಬೈಲ್ಸ್, ಆಟೋ ಕಾಂಪ್ಲೆಕ್ಸ್, ಶಿವಮೊಗ್ಗ ಎಸ್.ಬಿ ಹನುಮಂತಪ್ಪ, ಆಡಿಟರ್ ಅಂಡ್ ಟ್ಯಾಕ್ಸ್ ಪ್ರಾಕ್ಟಿಷನರ್, ಇವರುಗಳಿಗೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಗುವುದು ಎಂದರು.
SUMMARY | Shivamogga District Chamber of Commerce and Industry celebrated its founder’s day on December 11. It will be held at 4:30 pm at The Association’s Shantala Auditorium on The 28th. Shivamogga District Chamber of Commerce and Industry President B Gopinath said.
KEYWORDS | B Gopinath, Shivamogga, Shantala Auditorium,