SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 8, 2025
9 ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವು ಹಾಗೂ ಮಾಜಿ ಮ್ಯಾನೇಜರ್ ಶೋಭಾ ಎಂಬುವವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಬಂಗಾರ ಅಡಮಾನ ಸಾಲದ ಹಿನ್ನಲೆ ಪ್ರಕರಣ ದಾಕಲಾಗಿತ್ತು. ಆದ್ದರಿಂದ ಇಂದು ಬೆಳಿಗ್ಗೆ ಶಿವಮೊಗ್ಗದ ಕಾಮಾಕ್ಷಿ ಬೀದಿಯಲ್ಲಿರುವ ಶಿವುರವರ ನಿವಾಸದ ಮೇಲೆ ನಾಲ್ವರು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಗೌಡರ ಕಾರು ಚಾಲಕನಾಗಿದ್ದ ಶಿವು ಕಾರು ಚಾಲಕ ವೃತ್ತಿ ಬಿಟ್ಟು 9 ವರ್ಷಗಳಾಗಿತ್ತು. ಹಾಗೆಯೇ ಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಬಂಗಾರ ಅಡಮಾನದಲ್ಲಿ ಬಹು ಕೋಟಿ ರೂಪಾಯಿ ವಂಚನೆಯಾಗಿತ್ತು. ಆ ಹಿನ್ನಲೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಈ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ಈ ಹಿಂದೆ ಮ್ಯಾನೇಜರ್ ಆಗಿದ್ದ ಶೋಭಾ ನಿವಾಸದ ಮೇಲೂ ಸಹ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಪಾಲ ಗೌಡ ಬಡಾವಣೆಯ ನಿವಾಸದ ಮೇಲೆ ದಾಳಿ ಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಮೂರು ಪ್ರತ್ಯೇಕ ವಾಹನಗಳಲ್ಲಿ 8ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಆಗಮಿಸಿ ದಾಖಲೆಗಳ ಪರಿಶಿಲನೆ ನಡೆಸುತ್ತಿದ್ದಾರೆ.
2014ರ ಜೂನ್ ನಲ್ಲಿ ಶಿವಮೊಗ್ಗದ ಗಾಂಧಿ ಬಜಾರ್ ನಗರ ಶಾಖೆಯಲ್ಲಿ ಸುಮಾರು 62 ಕೋಟಿ ಯಷ್ಟು ಮೌಲ್ಯದ ನಕಲಿ ಚಿನ್ನ ಅಡಮಾನ ಹಗರಣ ನಡೆದಿತ್ತು. ಆ ಸಂದರ್ಭದಲ್ಲಿ ಶಾಖೆಯ ಮ್ಯಾನೇಜರ್ ಆಗಿದ್ದ ಶೋಭಾ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನಲೆ ಏಕಕಾಲಕ್ಕೆ ಎರಡು ಪ್ರತ್ಯೇಕ ಸ್ಥಳಗಳ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
SUMMARY | Nine years ago, the ED raided the houses of Shivu, who was working as the driver of DCC Bank president R M Manjunath Gowda’s car, and shobha, the manager.
KEYWORDS | ED raided, DCC Bank, manager,