ಡಿಕೆ ಶಿವಕುಮಾರ್‌ರನ್ನು ಮೊದಲ ಬಾರಿ ಹೊಗಳಿದ ಕೆ ಎಸ್‌ ಈಶ್ವರಪ್ಪ | ಕಾರಣವೇನು      

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 27, 2025

ಶಿವಮೊಗ್ಗ | ಉಪಮುಖ್ಯಮಂತ್ರಿಯಾದ ಡಿ ಕೆ ಶಿವಕುಮಾರ್‌ರವರು ನಾನು ಹಿಂದೂವಾಗಿಯೇ ಹುಟ್ಟಿದ್ದೇನೆ ಹಿಂದೂವಾಗಿಯೇ ಸಾಯುತ್ತೇನೆ ಎಂಬ ಹೇಳಿಕೆ ನೀಡಿರುವುದು ಬಹಳಾ ಸಂತೋಷ ತಂದಿದೆ ಎಂದು ಮಾಜಿ ಡಿ ಸಿಎಂ ಕೆ ಎಸ್‌ ಈಶ್ವರಪ್ಪ ತಿಳಿಸಿದರು.

ಇಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಡಿ. ಕೆ ಶಿವಕುಮಾರ್‌ ರವರು ಸ್ವಾತಂತ್ರ್ಯ ಪೂರ್ವದ ಸಿದ್ದಾಂತದ ಪ್ರಕಾರ ಮಾತನಾಡಿದ್ದಾರೆ. ಈ ಹಿಂದೆ ಗಾಂದೀಜಿ ಹುತಾತ್ಮರಾಗುವ ಕೊನೆಯ ಕ್ಷಣದಲ್ಲಿ ಹೇ ರಾಮ್‌ ಎಂಬುದರ ಮೂಲಕ ಪ್ರಾಣ ಬಿಟ್ಟರು. ಆ ಸ್ಪೂರ್ತಿ ಇಂದು ಡಿ ಕೆ ಶಿವಕುಮಾರ್ ಅವರಿಗೆ ಸಿಕ್ಕಿರಬಹುದು. ಅವರ ಈ  ಹೇಳಿಕೆ ಇಂದು ರಾಷ್ಟ್ರದ ಎಷ್ಟೋ ಜನ  ಯುವಕರಿಗೆ ಸ್ಫೂರ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಡಿಕೆ ಶಿವಕುಮಾರ್‌ ಹೇಳಿಕೆಯನ್ನು ಕೆಲವು ಕಾಂಗ್ರೆಸಿಗರು ಸುಮ್ಮನೆ  ವಿರೋಧಿಸುತ್ತಿದ್ದಾರೆ. ನನ್ನ ಪ್ರಕಾರ ಎಲ್ಲಾ ಕಾಂಗ್ರೆಸ್‌ನವರಿಗೆ ಹಿಂದೂ ಧರ್ಮದ ಬಗ್ಗೆ ಒಲವಿದೆ. ಆದ್ರೆ ಅದನ್ನು ಹೇಳಿಕೊಳ್ಳುವ  ಧೈರ್ಯ ಅವರಲ್ಲಿಲ್ಲ. ನಾನು ಮೊದಲನೇ ಬಾರಿಗೆ ಜೀವನದಲ್ಲಿ ಡಿ ಕೆ ಶಿವಕುಮಾರ್‌ರವರನ್ನು ಹೊಗಳುತ್ತಿರುವುದು. ಅದಕ್ಕೆ ಕಾರಣ  ಡಿ. ಕೆ ಶಿವಕುಮಾರ್‌ ರವರು  ಸ್ವಾತಂತ್ರ್ಯ ಪೂರ್ವದ ಸಿದ್ದಾಂತದ ಪ್ರಕಾರ ಮಾತನಾಡಿದ್ದು ಎಂದರು.

SUMMARY | Deputy Chief Minister D K Shivakumar said, “I was born a Hindu and I will die as a Hindu

KEYWORDS | D K Shivakumar, Hindu, k s eshwarappa, politics,

Share This Article