ಟ್ರ್ಯಾಕ್ಟರ್‌ ಟ್ರ್ಯಾಲಿಗಳಿಗೆ ಪೊಲೀಸರಿಂದ ಸ್ಟಿಕ್ಟರ್‌ | ಕಾರಣವೇನು ಗೊತ್ತಾ | ಕುತೂಹಲವಿದೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 2, 2024

ರಸ್ತೆಗಳಲ್ಲಿ ವಾಹನಸವಾರರಿಗೆ ಹೆಚ್ಚು ಕಿರಿಕಿರಿ ಆಗುವುದು ಟ್ರ್ಯಾಕ್ಟರ್‌ಗಳ ಸಂಚಾರ. ದಡಕುಬಡಕು ಎಂದು ಸಾಗುವ ಟ್ರ್ಯಾಕ್ಟರ್‌ಗಳು ರಾತ್ರಿಹೊತ್ತು ಮುಂದೆ ಸಾಗುತ್ತಿದೆ ಎಂಬುದು ಸಹ ಗೊತ್ತಾಗುವುದಿಲ್ಲ. ಈ ಕಾರಣಕ್ಕೆ ಪೊಲೀಸರು ಹಿಂದೆ ಬರುವ ವಾಹನಗಳಿಗೆ ಕಾಣಲಿ ಎಂಬ ಕಾರಣಕ್ಕೆ ಟ್ರ್ಯಾಕ್ಟರ್‌ ಟ್ರ್ಯಾಲಿಗಳಿಗೆ ಸ್ಟಿಕ್ಟರ್‌ ಅಂಟಿಸುತ್ತಿದ್ದಾರೆ.

- Advertisement -

ಇಂತಹದ್ದೊಂದು ಪ್ರಯತ್ನವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರುಗಳು ಕೆಂಚನಾಳ ಹಳ್ಳಿಗೆ ತೆರಳಿ ಟ್ರ್ಯಾಕ್ಟರ್‌ಗಳನ್ನ ಹುಡುಕಿ, ಅವುಗಳ ಟ್ರ್ಯಾಲಿಗಳಿಗೆ ಸ್ಟಿಕ್ಟರ್‌ ಅಂಟಿಸಿದ್ದಾರೆ. 

ಅಲ್ಕಲದೆ ಅಫಘಾತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಗ್ರಾಮ ಪಂಚಾಯಿತಿಯ ಸಹಯೋಗದಿಂದ ಕೆಂಚನಾಳ ಗ್ರಾಪಂ ವ್ಯಾಪ್ತಿಯ ಮಾದಾಪುರ, ಆಲುವಳ್ಳಿ , ಹೊನ್ನಕೊಪ್ಪ ಗಾಳಿಬೈಲು ಗ್ರಾಮದಲ್ಲಿ ಸಂಜೆ ತಡವಾಗಿ ಹೊಲಗಳಿಂದ ಮನೆಗಳಿಗೆ ಬರುವ, ಟ್ರ್ಯಾಕ್ಟರ್,ಟ್ರ್ಯಾಲಿಗಳಿಗೆ ಫ್ಲೆಕ್ಷನ್ ಸ್ಟಿಕ್ಕರ್ ಅಳವಡಿಸಲಾಗಿದೆ.

SUMMARY| To prevent accidents, the police went to Kenchanala village in Ripponpet and launched an innovative campaign to create awareness among motorists about accidents.

 

KEYWORDS|  police, Ripponpet, awarenes,   accidents,

Share This Article
Leave a Comment

Leave a Reply

Your email address will not be published. Required fields are marked *