SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 2, 2025
ಪೋಷಕರು ಮಕ್ಕಳ ವಿಷಯದಲ್ಲಿ ಎಷ್ಟೇ ಜಾಗೃತೆ ವಹಿಸಿದರೂ ಸಾಕಾಗುವುದಿಲ್ಲ. ಸ್ವಲ್ಪ ಮೈಮರೆತು ಮಕ್ಕಳ ಬಳಿ ಗಮನ ಹರಿಸದೆ ಹೋದರೆ ದೊಡ್ಡ ಅನಾಹುತಗಳೇ ನಡೆದುಹೋಗುತ್ತವೆ. ಇಲ್ಲಿಯೂ ಸಹ ಅಂತಹುದ್ದೇ ಒಂದು ಘಟನೆ ಸಂಭವಿಸಿದೆ. ಅದೇನೆಂದರೆ 14 ವರ್ಷದ ಬಾಲಕಿಯೊಬ್ಬಳು ಬಾಟಲಿಯಲ್ಲಿ ತುಂಬಿಟ್ಟಿದ್ದ ಔಷದಿಯನ್ನು ಜ್ಯೂಸ್ ಎಂದು ಕುಡಿದು ಸಾವನ್ನಪ್ಪಿದ್ದಾಳೆ.
ಈ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 14 ವರ್ಷದ ನಿಧಿ ಕೃಷ್ಣ ಎಂಬ ಬಾಲಕಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಅಲೋವೆರಾ ಜ್ಯೂಸ್‌ನ್ನು ಕುಡಿಯುತ್ತಿದ್ದಳು. ಆಗ ಪೋಷಕರು ಖಾಲಿಯಾದ ಆಲೋವೆರ ಡಬ್ಬದಲ್ಲಿ ಹರ್ಬಿಸೈಡ್ ಎಂಬ ಔಷದಿಯನ್ನು ತುಂಬಿಟ್ಟಿದ್ದರು. ಇದನ್ನು ತಿಳಿಯದ ಬಾಲಕಿ ಎಂದಿನಂತೆ ಮಾರ್ಚ್ 4 ರಂದು ಜ್ಯೂಸ್ ಎಂದು ಆ ಔಷದಿಯನ್ನು ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಹಿನ್ನಲೆ ಬ್ಯಾಟರಾಯನಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | A 14-year-old girl died after consuming a bottled medicine called juice.
KEYWORDS | 14 year old girl,died, medicine, juice,