ಜೋಗದ ಸಮೀಪ ವಾನರ ವಾರ್‌ | ಗುಂಪು ಗುಂಪಾಗಿ ಯುದ್ದ ಮಾಡಿದ ಮಂಗಗಳು | ವಿಡಿಯೋ ನೋಡಿ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 10, 2024

ಶಿವಮೊಗ್ಗ | ಮಂಗಗಳ ನಡುವಿನ ಪರಸ್ಪರ ಹೊಡೆದಾಟದಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾದ ಪ್ರಸಂಗ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ಆಸುಪಾಸಿನ ರಸ್ತೆಯಲ್ಲಿ ನಡೆದಿದೆ. ಈ ದೃಶ್ಯವನ್ನು ಸ್ಥಳಿಯರೊಬ್ಬರು ರೆಕಾರ್ಡ್‌ ಮಾಡಿದ್ದು , ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

ಇನ್ನೂ ಎರಡು ಗುಂಪುಗಳಾಗಿ ಡಿವೈಡ್‌ ಆದಂತೆ ಕಾಣುತ್ತಿರುವ ವಾನರ ಪಡೆ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಹಳೆಯ ಕಾಲದ ಯುದ್ಧದ ದೃಶ್ಯ ಕಂಡಂತಾಗುತ್ತಿದೆ. ಸುಮಾರು 20 ರಿಂದ 25 ಮಂಗಗಳು ನಡುರಸ್ತೆಯಲ್ಲಿ ಎರಡು ಟೀಂಗಳಾಗಿ ಫೈಟ್‌ ಮಾಡುತ್ತಿವೆ. ಕೆಲಹೊತ್ತು ನಡೆದ ಫೈಟ್‌ನ ಮಧ್ಯೆ ವಾಹನ ಸವಾರರು ಸಹ ಪರದಾಡಬೇಕಾಯ್ತು. ಮಂಗಗಳನ್ನು ಅಲ್ಲಿದ್ದವರು ಬೆರಸುವ ಪ್ರಯತ್ನ ಮಾಡಿದರೂ ಸಹ ಅವುಗಳು ಕ್ಯಾರೆ ಎನ್ನಲ್ಲಿಲ್ಲ. ಇದರಿಂದಾಗಿ ರಸ್ತೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌  ಉಂಟಾಗಿತ್ತು 



SUMMARY |  The incident took place on the road near Jog Falls in Shivamogga district when monkeys clashed with each other.  

KEYWORDS| Jog Falls,  Shivamogga, monkeys clashed, kannadanews,

Share This Article