SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 19, 2025
ಈ ಹಿಂದೆ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರೆಯೆ ಪಡೆದುಕೊಂಡಿತ್ತು. ಈ ಚಿತ್ರದ ಯಶಸ್ಸಿನ ಹಿನ್ನಲೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಜೈಲರ್ 2 ಚಿತ್ರವನ್ನು ಘೋಷಿಸಿದ್ದರು. ಈ ಚಿತ್ರದ ಶೂಟಿಂಗ್ ಈಗಾಗಲೆ ಆರಂಭವಾಗಿದ್ದು, ಜೈಲರ್ ಚಿತ್ರದಲ್ಲಿ ನರಸಿಂಹ ಎಂಬ ಪಾತ್ರವನ್ನು ಖಡಕ್ಕಾಗಿ ನಿರ್ಹಿಸಿದ್ದ ಶಿವಣ್ಣ ಜೈಲರ್ 2 ಚಿತ್ರಕ್ಕೆ 14 ದಿನಗಳ ಕಾಲ ಡೇಟ್‌ನ್ನು ಕೊಟ್ಟಿದ್ದಾರೆ.
ಜೈಲರ್ ಸಿನಿಮಾದಲ್ಲಿ ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್ ಲುಕ್ ಹಾಗೂ ಆಕ್ಟಿಂಗ್‌ಗೆ ತಮಿಳು ಜನ ಫಿದಾ ಆಗಿದ್ದರು. ಚಿತ್ರದಲ್ಲಿ ಪಾತ್ರದ ಅವಧಿ ಚಿಕ್ಕದಿದ್ದರೂ ಸಹ ಶಿವಣ್ಣ ಇಡೀ ಚಿತ್ರವನ್ನು ತಮ್ಮ ಅಭಿನಯದ ಮೂಲಕ ಕಬ್ಜಾ ಮಾಡಿದ್ದರು. ಇದೀಗ ಆ ಪಾತ್ರ ಜೈಲರ್ 2 ಚಿತ್ರದಲ್ಲೂ ಮುಂದುವರೆಯಲಿದ್ದು, ಶಿವಣ್ಣನ ಸ್ವಾಗ್ ಹಾಗೂ ಸ್ಟೈಲ್‌ನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾದುಕುಳಿತಿದ್ದಾರೆ.
#Shivanna Return as #Narasimha in #Jailer2#NelsonDilipkumar #Kannada pic.twitter.com/aHeaLjzSvX
— Filmy Corner ꭗ (@filmycorner9) February 19, 2025
SUMMARY | Shivanna, who played the role of Narasimha in jailor, has given a date of 14 days for jailor 2.
KEYWORDS | Shivanna,Narasimha, jailor 2,