SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 27, 2024
ಬೈಕ್ ವೀಲಿಂಗ್ ಮಾಡುತ್ತಿದ್ದ ವೇಳೆ ಟ್ಯಾಂಕರ್ ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ವಿಜಯಪುರದ ನಿವಾಸಿ 19 ವರ್ಷದ ಮನೋಜ್ ಹಾಗೂ 19 ವರ್ಷದ ಅರ್ಬಾಜ್ ಮೃತ ಯುವಕರು.
ಇತ್ತೀಚೆನ ದಿನಗಳಲ್ಲಿ ಯವಕರಿಗೆ ಹೈವೆಯಲ್ಲಿ ವೀಲಿಂಗ್ ಮಾಡುವುದು ಒಂದು ರೀತಿಯ ಕ್ರೇಜ್ ಆಗಿ ಬಿಟ್ಟಿದೆ. ಇದರ ಬಗ್ಗೆ ಪೊಲೀಸರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಯುವಕರು ಅದಕ್ಕೆ ಕ್ಯಾರೆ ಎನ್ನದೆ ವೀಲಿಂಗ್ ಮಾಡಿ ತಮ್ಮ ಸಾವಿಗೆ ತಾವೇ ಕಾರಣವಾಗುತ್ತಿದ್ದಾರೆ. ಇಂದು ಸಹ ಇಬ್ಬರು ಯುವಕರು ಬೈಕ್‌ನಲ್ಲಿ ವೀಲಿಂಗ್ ಮಾಡಲು ಹೋಗಿ ಆಯ ತಪ್ಪಿ ಟ್ಯಾಂಕರ್‌ಗರ ಡಿಕ್ಕಿ ಹೊಡೆದದ್ದಾರೆ. ಇದರ ಪರಿಣಾಮ ಯುವಕರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೇವನಹಳ್ಳಿಯ ಆಸ್ಪತ್ರೆಗೆ ಸಾಗಿಸಲಾಗಿದೆ.
SUMMARY | Two youths were killed on the spot when their bike collided with a tanker while they were wheeling on the bypass road in Devanahalli.
KEYWORDS | wheeling, Devanahalli, death,