ಜಿಲ್ಲೆಯಲ್ಲಿ ಪೊಲೀಸ್‌ ಧ್ವಜ ದಿನಾಚರಣೆ | ನಿವೃತ್ತ ಅಧಿಕಾರಿಗಳ ಸೇವೆಯ ಸ್ಮರಣೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 2, 2025

ಶಿವಮೊಗ್ಗದ ಡಿ ಎ ಆರ್‌ ಮೈದಾನದಲ್ಲಿ ಏಪ್ರಿಲ್‌ 1 ರಂದು ಪೊಲೀಸ್‌ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಿವಮೊಗ್ಗದ ಎಸ್‌ ಪಿ, ಜಿ. ಕೆ ಮಿಥುನ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿ ನಿವೃತ್ತ ಎ ಎಸ್‌ ಐ, ವಿ. ಎನ್. ಪುಟ್ಟು ಸಿಂಗ್ ಆಗಮಿಸಿ ಪೊಲೀಸ್ ತುಕಡಿಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು. ಹಾಗೆಯೇ ಆರ್ ಪಿ ಐ  ಪ್ರಶಾಂತ್ ರವರು ಪೆರೇಡ್ ಕಮಾಂಡರ್ ಆಗಿ ನೇತೃತ್ವವನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಏಪ್ರಿಲ್‌  01, 2023 ರಿಂದ ಮಾರ್ಚ್‌ 31, 2024 ರ ವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ನಲ್ಲಿ ಕಾರ್ಯನಿರ್ವಸಿ ನಿವೃತ್ತಿ ಹೊಂದಿದ್ದ ಒಟ್ಟು 31 ಪೊಲೀಸರ ಸೇವೆಯನ್ನು ಸ್ಮರಿಸಿದರು.

ಕರ್ನಾಟಕ ಪೊಲೀಸ್ ಕಾಯ್ದೆ 1963 ಅಸ್ತಿತ್ವಕ್ಕೆ ಬಂದ ನಂತರ, ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜವನ್ನು ರೂಪಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 2ನೇ ತಾರೀಕಿನಂದು ಪೊಲೀಸ್ ಧ್ವಜ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಈ ದಿನದಂದು ಪೊಲೀಸ್ ಇಲಾಖೆಯಲ್ಲಿ ನಿವೃತ್ತರಾದ ಅಧಿಕಾರಿ ಸಿಬ್ಬಂದಿಯವರು ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಲಾಗುತ್ತದೆ. 

SUMMARY | Police Flag Day was celebrated on April 1 at DAR Grounds in Shivamogga.

KEYWORDS |  Police Flag Day, April 1, DAR Ground, Shivamogga,   

Share This Article