SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 4, 2024
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ನಗರದ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆಯುತ್ತಿದೆ. ಈ ಕ್ರೀಡಾಕೂಟಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕ್ರೀಡೆಯಲ್ಲಿ ಕೇವಲ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಸಹಾ ತೊಡಗಿಕೊಳ್ಳುವುದು ಮುಖ್ಯ. ಕ್ರೀಡೆ ಎಂದ ಮೇಲೆ ಸೋಲು ಮತ್ತು ಗೆಲವು ಸಾಮಾನ್ಯವಾಗಿದ್ದು, ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದರು. ಹಾಗೆಯೇ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಷ ಪೂರ್ತಿ ಒತ್ತಡದಲ್ಲಿ ಕೆಲಸ ನಿರ್ವಹಿಸುವುದರಿಂದ ಒತ್ತಡ ನಿರ್ವಹಣೆಯು ಅವಶ್ಯಕವಾಗಿರುತ್ತದೆ. ಉತ್ತಮ ಹವ್ಯಾಸಗಳಲ್ಲಿ ಹಾಗೂ ಕ್ರೀಡೆಯಲ್ಲಿ ನಿಯಮಿತವಾಗಿ ತೊಡಗಿಕೊಳ್ಳುವ ಮೂಲಕ ಒತ್ತಡ ನಿರ್ವಹಣೆ ಮಾಡಲು ಸಾಧ್ಯವಿರುತ್ತದೆ. ಪೊಲೀಸ್ ಇಲಾಖೆಯು ಶಿಸ್ತುಬದ್ಧಇಲಾಖೆಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಒಟ್ಟಿಗೆ ಒಂದು ತಂಡವಾಗಿ ಆಡುವ ಮೂಲಕ ಪರಸ್ಪರ ಬೆರೆಯಲು ಮುಕ್ತ ಸಂವಹನ ನಡೆಸಲು ಹಾಗೂ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯವಾಗುತ್ತದೆ ಎಂದರು.
ಕ್ರೀಡೆಯಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ | ಮಿಥುನ್ ಕುಮಾರ್ ಜೆ.ಕ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ ಮಾತನಾಡಿ ಈ ಕ್ರೀಡಾಕೂಟ 3 ದಿನಗಳ ಕಾಲ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳೆರಡನ್ನೂ ಆಡಿಸುತ್ತಿದ್ದೇವೆ. ವಾಲಿಬಾಲ್, ಕಬ್ಬಡ್ಡಿ, ಬ್ಯಾಡ್ಮಿಂಟನ್, ಶಾಟ್‌ಪುಟ್, ಪುಟ್‌ಬಾಲ್‌ಗಳನ್ನೂ ಆಡಿಸುತ್ತಿದ್ದೇವೆ ಎಂದರು. ಹಾಗೆಯೇ ನಮ್ಮ ಪೊಲೀಸ್ ಇಲಾಖೆಯಲ್ಲಿ ಯಾವುದೇ ರಜೆ ಇರುವುದಿಲ್ಲ ಹಬ್ಬ ಹರಿದಿನಗಳ ಸಮಯದಲ್ಲೂ ನಮಗೆ ರಜೆ ಸಿಗುವುದಿಲ್ಲ. ನಮ್ಮ ಕೆಲಸ ಇರುವುದೇ ಹಾಗೆ ಇದರಿಂದಾಗಿ ನಮಗೆ ಮಾನಸಿಕ ಒತ್ತಡ ಸಹಜವಾಗಿಯೇ ಇರುತ್ತದೆ. 3 ಮೂರು ದಿನ ನಡೆಯುವ ಈ ಕ್ರೀಡೆಯಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂದರು.
SUMMARY | Shimoga District Police Annual Sports Meet was organised by the District Police at the Shivamogga District Armed Reserve Parade Ground here today.
KEYWORDS | Shimoga District Police Annual Sports Meet, organised by the District Police Shivamogga, mithun kumar,