ಜಿಲೆಟಿನ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 30, 2024

ಮಂಡ್ಯ ಜಿಲ್ಲೆಯಲ್ಲಿ ಯುವಕನೋರ್ವ ತಾನು ಪ್ರೀತಿಸಿದ ಪ್ರೇಯಸಿಯ ಮನೆ ಮುಂದೆ ಜಿಲೆಟಿನ್ ಕಡ್ಡಿ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಮ (20) ಮೃತ ಯುವಕನಾಗಿದ್ದಾನೆ (ಹೆಸರು ಬದಲಾಯಿಸಲಾಗಿದೆ). ರಾಮ ಜಿಲ್ಲೆಯ ಗ್ರಾಮವೊಂದರ ನಿವಾಸಿ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದನಂತೆ. ಇದಕ್ಕೆ ಪೋಷಕರ ವಿರೋಧ ವ್ಯಕ್ತವಾಗಿತ್ತು. ವಯಸ್ಸು ಆಗಿರದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಇಬ್ಬರು ಮನೆಬಿಟ್ಟು ಪರಾರಿಯಾಗಿದ್ದರು. ಆನಂತರ ಪೊಲೀಸ್‌ ಠಾಣೆಯೊಂದರಲ್ಲಿ ಪೊಲೀಸರು ಇಬ್ಬರನ್ನ ಪತ್ತೆ ಹಚ್ಚಿದ್ದರಷ್ಟೆ ಅಲ್ಲದೆ ರಾಮನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.

ಇದರಿಂದ ಮನನೊಂದ ಯುವಕ ಶನಿವಾರ ತಡರಾತ್ರಿ ಜಿಲಿಟಿನ್ ಸ್ಪೋಟಿಸಿಕೊಂಡು ಪ್ರಿಯತಮೆಯ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

SUMMARY |  A youth committed suicide by detonating gelatin in front of his girlfriend’s house in Mandya district.


KEYWORDS | suicide, Mandya,  gelatin,

Share This Article