SHIVAMOGGA | MALENADUTODAY NEWS | ಮಲೆನಾಡು ಟುಡೆ Jan 1, 2025
ಹೊಸವರುಷದ ಆರಂಭಕ್ಕೂ ಹಿಂದಿನ ದಿನ ಎಷ್ಟು ಮದ್ಯ ಮಾರಾಟವಾಗಿತ್ತು ಎಂಬುದನ್ನ ಹೊಸವರುಷಕ್ಕೆ ಲಾಟರಿ | ಒಂದೆ ದಿನ ನಾನೂರು ಕೋಟಿಗೂ ರೂಪಾಯಿಗೂ ಹೆಚ್ಚು ಮದ್ಯ ಖರೀದಿ ವರದಿಯಲ್ಲಿ ಓದಿದ್ದೀರಿ. ಇದೀಗ ಹೊಸವರುಷವನ್ನು ವೆಲ್‌ಕಮ್ ಮಾಡುವ ದಿನ ಅಂದರೆ ಡಿಸೆಂಬರ್ 31 ರಂದು ಎಷ್ಟು ಮದ್ಯ ಮಾರಾಟವಾಗಿದೆ ಎಂಬುದರ ಲೆಕ್ಕವು ಇಲಾಖೆಯಿಂದ ಲಭ್ಯವಾಗಿದೆ.
ಡಿಸೆಂಬರ್ 31 ರಂದು ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ಅವಧಿಗೆ ಅಂದರೆ ಕೇವಲ ಅರ್ಧದಿನದಲ್ಲಿ ಬರೋಬ್ಬರಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ ಎಂಬ ವರದಿ ಹೊರಬಿದ್ದಿದೆ. ಈ ವರುಷ ಅಬಕಾರಿ ಇಲಾಖೆ 250 ಕೋಟಿ ರೂಪಾಯಿ ಮದ್ಯ ಮಾರಾಟವಾಗುವ ನಿರೀಕ್ಷೆ ಹೊಂದಿತ್ತು. ಆದರೆ ಅರ್ಧದಿನದಲ್ಲಿಯೇ ಟಾರ್ಗೆಟ್ ರೀಚ್ ಆಗಿದೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಡಬ್ಬಲ್ ಆದಾಯ ಅಬಕಾರಿ ಇಲಾಖೆಗೆ ಲಭ್ಯವಾಗಿದೆ.
SUMMARY | Excise department sells liquor worth Rs 308 crore
KEY WORDS |liquor, Karnataka State Beverages Corporation , Excise department liquor sale