SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಶಿವಮೊಗ್ಗದ ಸಾಗರ ರೋಡ್‌ನಲ್ಲಿರುವ ಆದಾಯ ತೆರಿಗೆ ಕ್ವಾರ್ಟಸ್‌ನಲ್ಲಿರುವ ಮನೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಅದೃಷ್ಟಕ್ಕೆ ಇದರಿಂದ ಯಾರಿಗೂ ಅಪಾಯ ಸಂಭವಿಸಿಲಿಲ್ಲ. ಏಕೆಂದರೆ ಹಾವು ಮನೆಯವರ ಶೂನೊಳೆಗೆ ಸೇರಿಕೊಂಡಿತ್ತು. ಶೂ ಒಳಗೆ ಅವಿತು ಕುಳಿತಿದ್ದ ನಾಗರಹಾವನ್ನು ಉರಗತಜ್ಞ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.
ಚಳಿಗಾಲದಲ್ಲಿ ಹಾವುಗಳು ಬೆಚ್ಚಗಿನ ಜಾಗಗಳನ್ನ ಹುಡುಕಿಕೊಂಡು ತಮ್ಮನ್ನ ಸಂರಕ್ಷಣೆ ಮಾಡಿಕೊಳ್ಳುತ್ತವೆ. ಅದೇರೀತಿ ನಾಗರ ಹಾವಿನ ಮರಿಯೊಂದು ಇಲ್ಲಿನ ನಿವಾಸಿಯೊಬ್ಬರ ಮನೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಕಾಣಿಸಿದೆ. ಅದು ನೋಡನೋಡುತ್ತಿದ್ದಂತೆ ಅಲ್ಲಿಯೇ ಇದ್ದ ಶೂರಾಕ್‌ನಲ್ಲಿದ್ದ ಶೂನೋಳಗೆ ಹೋಗಿ ಅಡಗಿದೆ. ಆದರೆ ಹಾವು ಎಲ್ಲೋಯ್ತು ಎಂದು ಗೊತ್ತಾಗದೆ ಮನೆಯವರು ಸ್ನೇಕ್ ಕಿರಣ್‌ಗೆ ಫೋನಾಯಿಸಿದ್ದಾರೆ.
ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಹಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಮನೆ ಒಳಗೆ ಇದ್ದ ಹಾವು ಶೂ ಒಳಗೆ ಸೇರಿಕೊಂಡಿರುವುದರ ವಿಷಯ ತಿಳಿಯದ ಕಾರಣಕ್ಕೆ ಮನೆ ಪೂರಾ ಹುಡುಕಿ ಕೊನೆಗೆ ಶೂವನ್ನು ಚೆಕ್ ಮಾಡಿದಾಗ ಶೂ ಒಳಗಿಂದ ನಾಗರಹಾವು ಹೆಡೆಎತ್ತಿ ಹೊರಬಂದಿದೆ. ಸ್ನೇಕ್ ಕಿರಣ್ ಅದನ್ನ ಹಿಡಿದು ರಕ್ಷಣೆ ಮಾಡಿದ್ದಾರೆ. ಅದರ ವಿಡಿಯೋ ಇಲ್ಲಿದೆ.
ಸಾಗರ ರೋಡ್ ನ ಇನ್ಕಮ್ ಟ್ಯಾಕ್ಸ್ ಆಫೀಸ್ ಕ್ವಾಟ್ರಸ್ ನ ಸೇವಂತ್ ಎಂಬುವವರ ಮನೆಯಲ್ಲಿ ಶೂ ಒಳಗೆ ಅವಿತು ಕುಳಿತಿದ್ದ ನಾಗರಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ. pic.twitter.com/nwGBy4yuxH
— Prathap Prathap shetty (@Prathap68840568) December 21, 2024
SUMMARY | The cobra, which was hiding inside a shoe at the house of Sevanth of Income Tax Apis Quarters on Sagar Road, was rescued by snake expert Snake Kiran.
KEYWORDS | cobra, Snake Kiran, Sagara, shoe,