SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 9, 2024
ಶಿವಮೊಗ್ಗ | ಭಾರತೀಯ ಜೀವ ವಿಮಾ ನಿಗಮವು ಇತ್ತೀಚೆಗೆ ತನ್ನ ನಿಯಮಾವಳಿಗಳಲ್ಲಿ ಮಾಡಿದ ಬದಲಾವಣೆಗಳನ್ನು ವಿರೋಧಿಸಿ, ಶಿವಮೊಗ್ಗ ವಿಭಾಗೀಯ ಪ್ರತಿನಿಧಿಗಳ ಸಂಘ ಧರಣಿ ನಡೆಸ್ತಿದೆ. ಈ ಧರಣಿಯು ಶಿವಮೊಗ್ಗದ LIC ವಿಭಾಗೀಯ ಕಚೇರಿ ಮುಂಬಾಗದಲ್ಲಿ ನಡೆದಿದ್ದು, ಈ ಧರಣಿಯಲ್ಲಿ ಶಿವಮೊಗ್ಗ ದಾವಣಗೆರೆ ಹಾಗೂ ಚಿತ್ರದುರ್ಗದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ಗ್ರಾಹಕರ ಪಾಲಿಸಿ ಮೇಲಿನ ಜಿ.ಎಸ್.ಟಿ ರದ್ದತಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಜೀವ ವಿಮಾ ನಿಗಮಕ್ಕೆ ಆಗ್ರಹಿಸಿದರು.
ಪ್ರತಿನಿಧಿಗಳ ಮುಖ್ಯವಾದ ಬೇಡಿಕೆಗಳೇನು
ಗ್ರಾಹಕರ ಪಾಲಿಸಿ ಮೇಲಿನ ಜಿ.ಎಸ್.ಟಿ ರದ್ದತಿ, ಪಾಲಿಸಿಗಳ ಮೇಲಿನ ಬೋನಸ್ ಹೆಚ್ಚುವರಿ ಮಾಡುವುದು. ಪಾಲಿಸಿ ಮೇಲಿನ ಪ್ರವೇಶದ ವಯಸ್ಸು 50-55ಕ್ಕೆ ಏರಿಸುವುದು. ಪ್ರತಿನಿಧಿಗಳ ಕಮಿಷನ್ ನಲ್ಲಿ ಹಳೇ ಪದ್ಧತಿಯನ್ನು ಮುಂದುವರೆಸುವುದು. ಪ್ರತಿನಿಧಿಗಳ ಗ್ರಾಚ್ಯುಟಿ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತಂತೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
SUMMARY | Shimoga Divisional Representatives Association staged a massive dharna to protest against the recent changes made by the Life Insurance Corporation of India in business.
KEYWORDS | Shimoga Divisional Representatives Association, Life Insurance, protest,