SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 29, 2025
ಶಿವಮೊಗ್ಗ | ಇತ್ತಿಚೆಗೆ ಚನ್ನಬಸಪ್ಪನವರು ಸ್ವಲ್ಪ ನಾಗರೀಕರಾಗುತ್ತಿದ್ದಾರೆ ಅದೇ ನಮಗೆ ಸಂತೋಷದ ವಿಚಾರ ಎಂದು ಕೆಪಿಸಿಸಿ ವಕ್ತಾರ ಆಯನೂರ್ ಮಂಜುನಾಥ್ ಶಾಸಕ ಚನ್ನಬಸಪ್ಪ ವಿರುದ್ದ ವ್ಯಂಗ್ಯವಾಡಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಚನ್ನಬಸಪ್ಪನವರು ಸಾಕಷ್ಟು ಕ್ರೌರ್ಯದ ಮಾತುಗಳನ್ನಾಡಿದ್ದಾರೆ. ಆದರೆ ನಮ್ಮ ಸಚಿವರಾದ ಮಧು ಬಂಗಾರಪ್ಪನವರು ಏನೋ ಬಾಯ್ತಪ್ಪಿ ಹೇಳಿದ ಮಾತಿಗೆ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಇಂತಹ ಕ್ರೌರ್ಯದ ಮಾತುಗಳನ್ನಾಡಿ ಈಗ ನಾಲಿಗೆಯ ಮೇಲೆ ಹಿಡಿತವಿರಲಿ ಎನ್ನುವ ಚನ್ನಬಸಪ್ಪನವರು. ಇತ್ತೀಚೆಗೆ ಸ್ವಲ್ಪ ನಾಗರೀಕರಿರಾಗುತ್ತಿದ್ದಾರೆ ಅದೇ ನಮಗೆ ಸಂತೋಷದ ವಿಚಾರ ಎಂದು ಪಿಸಿಸಿ ವಕ್ತಾರ ಆಯನೂರ್ ಮಂಜುನಾಥ್ ಶಾಸಕ ಚನ್ನಬಸಪ್ಪ ವಿರುದ್ದ ವ್ಯಂಗ್ಯವಾಡಿದರು.
ಅಂದು ನೀವು ಮಾಡಿದ್ದು ಇಂದು ನಿಮಗೆ ವಾಪಸ್ಸು ಬರುತ್ತಿದೆ
ನಂತರ ಗೊವೀಂದಾಪುರದ ಆಶ್ರಯ ಮನೆಗಳ ವಿಚಾರವಾಗಿ ನಡೆದ ಸಭೆಗೆ ಮಧುಬಂಗಾರಪ್ಪನವರು ತನ್ನನ್ನು ಆಹ್ವಾನಿಸಿಲ್ಲ ಎಂಬ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ ಆಯನೂರು ಮಂಜುನಾಥ್, ಚನ್ನಬಸಪ್ಪನವರೇ ನೀವು ಈಶ್ವರಪ್ಪ ನವರು ಸಚಿವರಿದ್ದಾಗ ನೀವು ಬೇರೆ ಶಾಸಕರ ಬಗ್ಗೆ ಯೋಚನೆ ಮಾಡುತ್ತಿದ್ರಾ. ಈಶ್ವರಪ್ಪನವರ ಎಡಬಲದಲ್ಲಿ ನೀವೇ ಇರುತ್ತಿದ್ರಿ ಆಗಾ ಬೇರೆ ಶಾಸಕರನ್ನು ಕರೆದು ಕಾರ್ಯಕ್ರಮ ಮಾಡಲಿಲ್ಲ. ಅಷ್ಟೇ ಅಲ್ಲದೆ ನಿಮ್ಮಷ್ಟೇ ಅಧಿಕಾರವಿರುವ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ರವರನ್ನು ನೀವು ಕರೆದು ಕಾರ್ಯಕ್ರಮ ಮಾಡುತ್ತಾ ಇರಲಿಲ್ಲ ಅಂದು ನೀವು ಮಾಡಿದ್ದು, ಇಂದು ನಿಮಗೆ ವಾಪಸ್ಸು ಬರುತ್ತಿದೆ ಅಷ್ಟೇ ಎಂದರು.
SUMMARY | KPCC spokesperson Ayanur Manjunath took a jibe at MLA Chennabasappa and said that he is happy that Channabasappa is becoming a little citizen in the recent past
KEYWORDS | KPCC spokesperson, Ayanur Manjunath, MLA, Chennabasappa,