SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 7, 2025
ಶಿವಮೊಗ್ಗ | ಇತ್ತೀಚಿನ ದಿನಗಳಲ್ಲಿ ಘಿಬ್ಲಿ ಫೋಟೋ ಎಲ್ಲಡೆ ವೈರಲ್ ಆಗುತ್ತಿವೆ. ಯೂಟ್ಯೂಬ್ ಇನ್ಸ್ಟಾಗ್ರಾಂ ಫೇಸ್‌ಬುಕ್ ಎಲ್ಲೆಡೆ ಘಿಬ್ಲಿ ಫೋಟೋದೆ ಹವಾ. ನಮ್ಮ ನಿಜವಾದ ಫೋಟೋವನ್ನು ಆನಿಮೇಟೆಡ್ ಆಗಿ ಕನರ್ಟ್ ಮಾಡಿ ನಮಗೆ ನೀಡುವ ಘಿಬ್ಲಿ ಟ್ರೆಂಡ್ ಬಗ್ಗೆ ಇದೀಗ ತಜ್ಙರು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇದನ್ನು ಬಳಸುವಾಗ ತಮ್ಮ ಗೌಪ್ಯತೆಯನ್ನು ಗಮನದಲ್ಲಿಟ್ಟು ಕೊಂಡು ಬಳಸಿ ಎಂದು ತಜ್ಞರು ಸೂಚಿಸಿದ್ದಾರೆ. ಇದರ ನಡುವೆ ನಮ್ಮ ಶಿವಮೊಗ್ಗದ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಘಿಬ್ಲಿ ಕುರಿತಾಗಿ ಜಾಗೃತಿ ಮೂಡಿಸುವ ವಿಶೇಷವಾದ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಘಿಬ್ಲಿ ಶೈಲಿಯ ಫೊಟೋಗಳನ್ನು ರಚಿಸುವಾಗ ನಿಮ್ಮ ವೈಯಕ್ತಿಯ ಚಿತ್ರಗಳನ್ನು ಬಳಸುವ ಮುನ್ನ, ಎಚ್ಚರ ಅಧೀಕೃತ ವೆಬ್ಸೈಟ್‌ಗಳಲ್ಲಿ ನಿಮ್ಮ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂಬ ಜಾಗೃತಿಯ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

— SP Shivamogga (@Shivamogga_SP) April 6, 2025
ಪೊಲೀಸರು ಅಷ್ಟೇ ಅಲ್ಲದೆ ಎಲ್ಲಾ ತಜ್ಙರು ಸಹ ರೀತಿ ಹೇಳುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಎಲ್ಲರಲ್ಲಿ ಮೂಡುವುದು ಸಹಜ. ಅದಕ್ಕೆ ಕಾರಣವೇನೆಂದರೆ ಬಳಕೆದಾರರು ಘಿಬ್ಲಿಯಲ್ಲಿ ಒಮ್ಮೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿದ ಬಳಿಕ ಆ ಫೋಟೋಗಳ ಬಳಕೆಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಓಪನ್ ಎಐನ ಗೌಪ್ಯತಾ ನೀತಿಯು ಬಳಕೆದಾರರ ಫೋಟೋಗಳನ್ನು ತಮ್ಮ ಉದ್ದೇಶಗಳಿಗೆ ಬಳಸಬಹುದು. ಅಷ್ಟೇ ಅಲ್ಲದೆ ಮಾನಹಾನಿ ಹಾಗೂ ಕಿರುಕುಳಕ್ಕೆ ಬಳಸಬಹುದಾದ ವಿಷಯವನ್ನು ರಚಿಸಲು ಸಹ ಬಳಸಬಹುದು. ಅದಲ್ಲದೇ, ಬೇರೋಬ್ಬರ ಗುರುತನ್ನು ಕದಿಯುವ ಮೂಲಕ ನೀವು ಅಪ್‌ಲೋಡ್ ಮಾಡುವ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಅಧೀಕೃತ ಮಾಹಿತಿ ಹಂಚಿಕೊಳ್ಳುವ ಮುನ್ನ ಎಚ್ಚರ ಎಂದು ತಜ್ಙರು ಹೇಳಿದ್ದಾರೆ.
SUMMARY | Nowadays, ghibli’s s, ghibli is going viral everywhere. YouTube, Instagram, Facebook, Ghibli Photo De Hawa everywhere
KEYWORDS | Nowadays, ghibli, photo, viral,