ಗೂಗಲ್ ಪೇ ನೀಡುತ್ತೆ ಲಕ್ಷಾಂತರ ರೂಪಾಯಿ ಸಾಲ..
ಬ್ಯಾಂಕ್ ಹಾಗೂ ಇತರೆ ಫೈನಾನ್ಸ್ ಸಂಸ್ಥೆಗಳು ಹೇಗೆ ಸಾಲವನ್ನ ಹೇಗೆ ನೀಡುತ್ತೆ. ಮತ್ತು ಅದನ್ನು ಪಡೆಯುವುದು ಹೇಗೆ ಎಂಬ ಮಾಹಿತಿ ನಮಗೆಲ್ಲ ತಿಳಿದೇ ಇರುತ್ತದೆ. ಆದರೆ ಪ್ರಸ್ತುತ ಮುಂದುವರೆದ ತಂತ್ರಜ್ಙಾನದಲ್ಲಿ ಡಿಜಿಟಲ್ ಫೇ ಗಳಲ್ಲಿ ಒಂದಾದ ಗೂಗಲ್ ಪೇ google pay ಮೂಲಕ ಸಹ ನಾವು ಸಾಲ ಸೌಲಭ್ಯವನ್ನು ಪಡೆಯಬಹುದು. ಹಾಗಾದರೆ ಈ ಗೂಗಲ್ ಫೇ ನಲ್ಲಿ ಸಾಲ ಪಡೆಯುವುದು ಹೇಗೆ ಇದರಲ್ಲಿ ಸಾಲ ಪಡೆಯುವ ಪ್ರಕ್ರಿಯೆ ಏನಿರುತ್ತೆ. ಎಷ್ಟು ಲಕ್ಷದ ವರೆಗೆ ಇಲ್ಲಿ ಸಾಲ ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ವ್ಯಾಗಿ ತಿಳಿದುಕೊಳ್ಳೂಣ ಬನ್ನಿ.
ಗೂಗಲ್ ಪೇ ತನ್ನ ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಈಗ ಸಾಲ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಇದಕ್ಕೆ ಹೆಚ್ಚಿನ ದಾಖಲೆಯೇನು ಬೇಕೆಂದಿಲ್ಲ. ಗೂಗಲ್ ಫೇ ಬುಸಿನೆಸ್ ಆ ಪ್ ಒಂದಿದ್ದರೆ ಸಾಕು ಇಲ್ಲಿ ಬರೊಬ್ಬರಿ 8 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ನಾವು ಪಡೆಯಬಹುದು. ಗೂಗಲ್ ಫೇ ಈ ಸಾಲವನ್ನು ಬೇರೆ ಬೇರೆ ಸಾಲಧಾಯಿ ಕಂಪನಿಗಳ ಮೂಲಕ ತನ್ನ ಗ್ರಾಹಕರಿಗೆ ಒದಗಿಸುತ್ತದೆ.
ಗೂಗಲ್ ಪೇ ಎಷ್ಟು ಲಕ್ಷದವರೆಗೆ ಸಾಲ ನೀಡುತ್ತದೆ:
ಹಣ ವರ್ಗಾವಣೆಗಾಗಿ ಗೂಗಲ್ ಫೇ ಬಳಸುವವರು ಯಾರಾದರೂ ಈ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ಅವಕಾಶವಿದೆ. ಇಲ್ಲಿ ಗೂಗಲ್ ಫೇ 10000 ಸಾವಿರದಿಂದ 8 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸುತ್ತದೆ.
ಈ ಸಾಲದ ಮೇಲೆ ಬಡ್ಡಿ ಹೇಗೆ ನಿಗದಿಯಾಗುತ್ತದೆ.
ಗ್ರಾಹಕರ ಸಿಬಿಲ್ ಸ್ಕೋರ್ ಮೂಲಕ ಬಡ್ಡಿ ದರ ನಿಗದಿಯಾಗುತ್ತದೆ. ಗೂಗಲ್ ಪೇ ಇಲ್ಲಿ ಬಡ್ಡಿದರವನ್ನು ವರ್ಷಕ್ಕೆ ನಿಗದಿಪಡಿಸಿದ್ದು, ವರ್ಷಕ್ಕೆ ಇಲ್ಲಿ 13.99 ಪರ್ಸೆಂಟ್ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.ಸುಲಭ ಕಂತುಗಳಲ್ಲಿ ಸಾಲ ಮರುಪಾವತಿಗೆ ಅವಕಾಶವಿದ್ದು, ಹಾಗೆಯೇ ಪಡೆದ ಸಾಲವನ್ನು ತೀರಿಸಲು 6 ತಿಂಗಳಿನಿಂದ 4 ವರ್ಷದವರೆಗೆ ಸಮಯವನ್ನು ನಿಗದಿಪಡಿಸಿದ್ದು, ತಿಂಗಳಿಗೆ ಎಷ್ಟು ಹಣ ಕಟ್ಟಬೇಕೆನ್ನುವುದು ಅವರು ಎಷ್ಟು ಸಾಲ ಪಡೆದಿರುತ್ತಾರೆ ಎಂಬುದರ ಮೇಲೆ ನಿಗದಿಯಾಗುತ್ತದೆ.
ಗೂಗಲ್ ಪೇ ನಿಂದ ಸಾಲವನ್ನು ಪಡೆಯುವ ಪ್ರಕ್ರಿಯೆ ಹೇಗೆ
ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಬುಸಿನೆಸ್ ಆಪ್ ಇರಬೇಕು. ಅದನ್ನು ತೆರೆದಾಗ ಅದರ ಕೊನೆಯಲ್ಲೆ ಮ್ಯಾನೇಜ್ ಯುವರ್ ಮನಿ ಎಂಬ ವಿಭಾಗದಲ್ಲಿ ಲೋನ್ಸ್ ಎಂಬ ಆಯ್ಕೆ ಇರುತ್ತದೆ. ಅದಕ್ಕೆ ಕ್ಲಿಕ್ ಮಾಡಿದಾಗ ಅಪ್ಲೈ ಆಯ್ಕೆ ಕೇಳುತ್ತದೆ. ಅದನ್ನು ಒತ್ತಿದಾಗ ಅದು ಕೇಳುವ ಎಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ. ಅದನ್ನು ನೀಡಿದ ನಂತರ ನೀವು ಲೋನ್ ಪಡೆಯಲು ಅರ್ಹರಿದ್ದರೆ ನಿಮ್ಮ ಖಾತೆಗೆ ಹಣ ಜಮಾವಾಗುತ್ತದೆ.
ಇದು ಗೂಗಲ್ ಪೇ ತಂದ ಒಂದು ಉತ್ತಮವಾದ ಸಾಲ ಸೌಲಭ್ಯವಾಗಿದೆ. ಇದರಿಂದಾಗಿ ಲೋನ್ ಗಾಗಿ ವರ್ಷಾನುಗಟ್ಟಲೆ ಬ್ಯಾಂಕ್ ಗಳಿಗೆ ದಾಖಲೆಗಳನ್ನು ಹಿಡಿದುಕೊಂಡು ಒಡಾಡುವಂತಹ ಕೆಲಸ ಇರುವುದಿಲ್ಲ. ಸಾಮಾನ್ಯರಿಗೆ ಇದೊಂದು ಉತ್ತಮ ಯೋಜನೆಯಾಗಿದೆ.
SUMMARY| Google pay is now offering loan facility as per the eligibility of its customers.
KEYWORDS | Google pay, loan facility, customers, imformativenews,