SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 11, 2025
ಬಿಹಾರ್ | ದುಷ್ಕರ್ಮಿಗಳ ಗುಂಪೊಂದು ಖಾಸಗಿ ಶಾಲೆಯ ಮೇಲೆ ಗ್ರನೆಡ್ ತರಹದ ಬಾಂಬ್ ಗಳನ್ನು ಎಸೆದ ಆಘಾತಕಾರಿ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ. ಆ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿರುವಂತೆ ಸುಮಾರು 10 ರಿಂದ 12 ಜನ ದುಷ್ಕರ್ಮಿಗಳು ಶಾಲೆಯ ಮೇಲೆ ಬಾಂಬ್ ಹಾಗೂ ಕಲ್ಲನ್ನು ಎಸೆದಿದ್ದಾರೆ. ಅಷ್ಟೇ ಅಲ್ಲದೆ ಅದನ್ನು ಎಸೆದು ಅದು ಸಿಡಿಯುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕೃತ್ಯದಿಂದ ಭಯಬೀತರಾದ ಸ್ಥಳೀಯರು ಘಟನೆ ಸಂಬಂಧ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಈ ಹಿನ್ನಲೆ ಸಿಸಿ ಟಿವಿ ದೃಷ್ಯವನ್ನು ಪರಿಶೀಲಿಸಿದ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
SUMMARY | In a shocking incident, a group of miscreants hurled grenade-like bombs at a private school in Bihar’s Hajipur
KEYWORDS | private school, bomb, Bihar, viral video,