ಕ್ಷುಲ್ಲಕ ಕಾರಣಕ್ಕೆ ವೃದ್ದನ ಕೊಲೆ | ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 14, 2025

ಕ್ಷುಲ್ಲಕ ಕಾರಣಕ್ಕೆ ದಿನಸಿ ಅಂಗಡಿ ನಡೆಸುತ್ತಿದ್ದ 62 ವರ್ಷದ ವೃದ್ದನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ  ಹೈದರಾಬಾದ್‌ ನ ಕಂಚನ್‌ಗಂಗ್‌ನ ಬಾಬಾ ನಗರದಲ್ಲಿ ನಡೆದಿದೆ. ಈ ಘಟನೆಯ ದೃಷ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

- Advertisement -

ವಿಡಿಯೋದಲ್ಲಿರುವಂತೆ ವೃದ್ದರೊಬ್ಬರ ಅಂಗಡಿಯ ಮುಂದೆ ಯುವಕರ ಗುಂಪೊಂದು ಕುರ್ಚಿಗಳನ್ನು ಹಾಕಿ ಕುಳಿತುಕೊಂಡಿದ್ದರು. ಈ ವೇಳೆ ವೃದ್ದರು ಅದನ್ನು ತೆಗೆಯುವಂತೆ ಯುವಕರಿಗೆ ಹೇಳಿದ್ದಾರೆ. ಅಷ್ಟಕ್ಕೇ ಯುವಕರು ವೃದ್ದನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಈ ಹಿಂದೆ ಹಾರ್ಟ್‌ ಸರ್ಜರಿಗೆ ಒಳಗಾಗಿದ್ದ ವೃದ್ದ ಜಾಕೀರ್‌ ಹುಸೇನ್‌ ಸಾವನ್ನಪ್ಪಿದ್ದಾರೆ.



SUMMARY | A 62 year old man, who was running a grocery shop over a petty issue, was beaten to death by a group of youths

KEYWORDS |  death, youths, viral video,

 

Share This Article