SHIVAMOGGA | MALENADUTODAY NEWS | ಮಲೆನಾಡು ಟುಡೆ|Nov 13, 2024
ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟು18 ವರ್ಷದ ಬಳಿಕ ಆಕೆಯ ಅಂತ್ಯಸಂಸ್ಕಾರ ನಡೆಸಿದ ಅಪರೂಪದ ಘಟನೆ ನಡೆದಿದೆ.
2006ರಲ್ಲಿ ಅಯ್ಯಂಗೇರಿಯಿಂದ ಕಾಸರಗೋಡಿನ ಕೆ.ಸಿ.ಹಂಝ ಎಂಬುವರು ಮನೆ ಕೆಲಸಕ್ಕೆಂದು ಸಫಿಯಾ ಎಂಬ ಬಾಲಕಿಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಲಕಿ ಮೈಮೇಲೆ ಬಿಸಿ ಗಂಜಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ಪ್ರಕರಣ ದಾಖಲಾಗುವ ಹೆದರಿಕೆಯಿಂದ ಹಂಝ ಎಂಬಾತ ಆಕೆಯನ್ನು ಕೊಲೆ ಮಾಡಿದ್ದ. ಅಲ್ಲದೆ ಬಾಲಕಿಯ ಮೃತದೇಹವನ್ನು ಗೋವಾದಲ್ಲಿ ಹೂತ್ತಿದ್ದ. ಬಳಿಕ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪಾಲಕರಿಗೆ ತಿಳಿಸಿದ್ದ.
ಈ ವಿಷಯ ತಿಳಿದ ಪಾಲಕರು ಸಫಿಯಾ ಕ್ರಿಯಾ ಸಮಿತಿ ಎಂಬ ಸಮಾನ ಮನಸ್ಕರ ಗುಂಪೊಂದನ್ನು ರಚಿಸಿಕೊಂಡು ಕಾಸರಗೋಡಿನಲ್ಲಿ ಸತತ 90 ದಿನ ಪ್ರತಿಭಟನೆ ನಡೆಸಿದ್ದರು. ನಂತರ ಕೇರಳ ಸರ್ಕಾರ ಪ್ರಕರಣದ ತನಿಖೆಯನ್ನು ಕೇರಳ ಅಪರಾಧ ವಿಭಾಗಕ್ಕೆ ವರ್ಗಾಯಿಸಿತ್ತು. ತನಿಖೆ ನಡೆಸಿದಾಗ 2008 ರಲ್ಲಿ ಬಾಲಕಿಯ ಅಸ್ಥಿಪಂಜರ ಗೋವಾದಲ್ಲಿ ಪತ್ತೆಯಾಗಿತ್ತು. ಆನಂತರ ಪ್ರಕರಣದ ವಿಚಾರಣೆ ನಡೆದು ಕೋರ್ಟ್ 2019 ರಲ್ಲಿ ಅಂತಿಮ ತೀರ್ಪು ನೀಡಿತ್ತು. ಈ ಬಳಿಕ ಕೋರ್ಟ್‌ಗೆ ಮೃತಳ ಅಸ್ತಿಪಂಜರವನ್ನು ತಮ್ಮ ಸುಪರ್ಥಿಗೆ ನೀಡುವಂತೆ ಪೋ಼ಷಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೋರ್ಟ್ ಅದಕ್ಕೆ ಅನುಮತಿ ನೀಡಿದೆ. ಕೋರ್ಟ್ನಿಂದ ಅಸ್ತಿಪಂಜರವನ್ನ ಪಡೆದ ಪೋಷಕರು ಇತ್ತೀಚೆಗೆ ಅಂತ್ಯಸಂಸ್ಕಾರ ನಡೆಸಿದ್ದಾರೆ.
SUMMARY| Madikeri: In a rare incident, a girl was cremated 18 years after she died at Ayyangeri near Bhagamandala
KEY WORDS | rare incident, girl was cremated 18 years after she died,