SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 13, 2024
ಶಿವಮೊಗ್ಗ | ಕೇರಳ ಸಮಾಜಂ ವತಿಯಿಂದ ಇದೇ ಡಿಸೆಂಬರ್ 15 ರಂದು ಓಣಾಘೋಷಂ ಎಂಬ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಗರದ ವಾಜಪೇಯಿ ಲೇಔಟ್‌ನಲ್ಲಿರುವ ಸಭಾಭವನದಲ್ಲಿ ನಡೆಸುತ್ತಿದ್ದೇವೆ ಎಂದು ಕೇರಳ ಸಮಾಜಂನ ಕಾರ್ಯದರ್ಶಿ ಗಿರೀಶ್ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ,ಈ ಕಾರ್ಯಕ್ರಮವನ್ನು ಮಾನ್ಯ ಶಿಕ್ಷಣ ಸಚಿವರಾದ ಎಸ್ ಮಧುಬಂಗಾರಪ್ಪನವರು ಹಾಗೂ ಸಂಸದರಾದ ಬಿವೈ ರಾಘವೇಂದ್ರರವರು ಹಾಗೂ ಮಾಜಿ ಡಿಸಿಎಂ ಈಶ್ವರಪ್ಪರವರು ಉದ್ಘಾಟಿಸಲಿದ್ದಾರೆ ಎಂದರು. ಹಾಗೆಯೇ ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್ ಎನ್ ಚೆನ್ನಬಸಪ್ಪರವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡರು ಸೇರಿದಂತೆ ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದರು. ಈ ಸಾಂಸ್ಕ್ರತಿಕ ಕಾರ್ಯಕ್ರಮದ ಮುಖ್ಯ ಉದ್ದೇಶ ನಮ್ಮ ಕೇರಳದ ಸಾಂಸ್ಕ್ರತಿಕ ನೃತ್ಯ ಗಳನ್ನು ಎಲ್ಲರಿಗೂ ತಿಳಿಸುವುದಾಗಿದೆ. ಹಾಗೆಯೇ ಈ ಕಾರ್ಯಕ್ರಮದಲ್ಲಿ ಕೇರಳದ 21 ವಿಧದ ಸಸ್ಯಹಾರಿ ತಿನಿಸುಗಳನ್ನು ಮಾಡಿರುತ್ತೇವೆ. ಈ ಮೂಲಕ ಕೇರಳದ ಅಡುಗೆ ಪದಾರ್ಥವನ್ನುತಿಳಿಸುವ ಉದ್ದೇಶ ಹೊಂದಿದ್ದೇವೆ ಎಂದರು
SUMMARY | Kerala Samajam secretary Girish said that a cultural programme titled Onaghosham will be held on December 15 at the auditorium in Vajpayee Layout in the city.
KEYWORDS | Kerala Samajam, cultural programme, Onaghosham, shivamogga,