SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಶಿವಮೊಗ್ಗ | 2023ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಶಿವಮೊಗ್ಗ ಕರ್ನಾಟಕ ಸಂಘ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಆ ಸವಿನೆನಪಿಗಾಗಿ ಸಾಹಿತ್ಯದಲ್ಲಿ ಹೆಸರು ಮಾಡಿದ ಸಾಧಕರಿಗೆ ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಈಬಾರಿ ಆ ಪ್ರಶಸ್ತಿಯನ್ನು ಹೆಗ್ಗೋಡಿನ ರಂಗಕರ್ಮಿ ಕೆ ವಿ ಅಕ್ಷರ ಇವರಿಗೆ ನೀಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಶಂಕರನಾರಾಯಣ ಶಾಸ್ತ್ರಿ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದವರು ಹೆಗ್ಗೋಡಿನವರಾದ ಕೆ.ವಿ. ಅಕ್ಷರ ಅವರು ಕರ್ನಾಟಕ ರಂಗಭೂಮಿಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಅಂತಾರಾಷ್ಟ್ರೀಯ ಖ್ಯಾತಿಯ “ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ನಿರ್ದೇಶಕರಾಗಿರುವ ಅಕ್ಷರ ಅವರು ತಮ್ಮ ತಂದೆಯವರಾದ ಕೆ.ವಿ. ಸುಬ್ಬಣ್ಣನವರಂತೆಯೇ ರಂಗಭೂಮಿ ಹಾಗೂ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಅಕ್ಷರ ಅವರು ಸಾಗರದಲ್ಲಿ ತಮ್ಮ ಬಿ.ಎ. ಪದವಿಯ ಪಡೆದ ನಂತರದಲ್ಲಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದು ರಂಗಭೂಮಿಯ ಕುರಿತಾದ ತಮ್ಮ ಸ್ನಾತಕೋತ್ತರ ಪದವಿಯನ್ನು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಪಡೆದಿರುತ್ತಾರೆ.
ಹೀಗೆ ಅನೇಕ ಸಾಧನೆ ಮಾಡಿರುವ ಅಕ್ಷರರವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದೇವೆ. ಪ್ರಶಸ್ತಿಯು ರೂ: 15,000/- ನಗದು ಮತ್ತು ಫಲಕವನ್ನೊಳಗೊಂಡಿದ್ದು, ಈ ಕಾರ್ಯಕ್ರಮವು ಫೆಬ್ರವರಿ 8 ರಂದು ಸಂಜೆ 5:30ಕ್ಕೆ ಜರುಗಲಿದೆ ಎಂದರು.
ಹಾಗೆಯೇ ಶಿವಮೊಗ್ಗ ಕರ್ನಾಟಕ ಸಂಘ ವತಿಯಿಂದ ಫೆಬ್ರವರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು
ಶತಾವಧಾನಿ ಗಣೇಶ್ ಉಪನ್ಯಾಸ
ಪೆಬ್ರವರಿ 12 ರ ಬುಧವಾರದಂದು ಕರ್ನಾಟಕ ಸಂಘದ ಸಭಾಭವನ ದಲ್ಲಿ ಸಂಜೆ 5:30ಕ್ಕೆ ಬಹುಶ್ರುತ ವಿದ್ವಾಂಸ ಶತಾವಧಾನಿ ಗಣೇಶ್ ಕರ್ನಾಟಕ ಸಂಘದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸುತ್ತಿದ್ದು, “ಡಿ.ವಿ.ಜಿ. ಅವರ ಜ್ಞಾಪಕ ಚಿತ್ರಶಾಲೆ” ಕುರಿತು ಉಪನ್ಯಾಸ ನೀಡಲಿದ್ದಾರೆ.
ನಾ ಡಿಸೋಜ ನಮನ ಕಾರ್ಯಕ್ರಮ
ಫೆಬ್ರವರಿ 15ರ ಶನಿವಾರದಂದು ಇತ್ತೀಚೆಗೆ ನಮ್ಮನ್ನಗಲಿದ ಸಾಹಿತಿ, ಕರ್ನಾಟಕ ಸಂಘದ ಗೌರವ ಸದಸ್ಯರೂ ಆದ ನಾ. ಡಿಸೋಜ ಅವರ ಸ್ಮರಣಾರ್ಥ “ನಾ.ಡಿ. ನಮನ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಹ್ಯಾದ್ರಿ ಕಾಲೇಜಿನ ಅತಿಥಿ ಉಪನ್ಯಾಸಕ ಶಿವಣ್ಣ ಶ್ರದ್ಧಾಂಜಲಿ ನುಡಿಯನ್ನಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ, ಉಪಸ್ಥಿತಿ ಡಾ. ನಾ. ಡಿಸೋಜ ಅವರ ಪತ್ರ ಶ್ರೀ ನವೀನ್ ಡಿಸೋಜ ವಹಿಸುವರು, ನಂತರ ಗಾರ್ಗಿ ಕಾರೇಹಕ್ಲು ಇವರ ನಿರ್ದೇಶನದ ನಾಡಿ ಬದುಕು-ಬರಹ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿವರಿಸಿದರು
SUMMARY | In 2023, the State Government of Karnataka honoured him with the Rajyotsava Award in recognition of his services in the field of Literature of Shivamogga Karnataka Sangha.
KEYWORDS | Rajyotsava Award, State Government,Shivamogga Karnataka Sangha,