SHIVAMOGGA| MALENADUTODAY NEWS | ಮಲೆನಾಡು ಟುಡೆ Mar 28, 2025
ರೀಲ್ಸ್ ಕಾಲದಲ್ಲಿ ತಪ್ಪಾ ಸರಿನಾ ಅಂತಾ ಜಡ್ಜ್ ಮಾಡುವುದೆ ಕಷ್ಟವಾಗಿದೆ. ಆದರೆ, ಮಾಡಿದ್ದಕ್ಕೆ ಪ್ರತಿಯಾಗಿ ರಿಯಾಕ್ಷನ್ ಅಂತು ಇದ್ದೆ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲಸ ಪಡೆದುಕೊಳ್ಳಲೇ ಬೇಕು ಎನ್ನುವ ಹಠಕ್ಕೆ ಬಿದ್ದು ಫೇಕ್ ಮಾರ್ಕ್ಸ್ ಕಾರ್ಡ್ ನೀಡಿದ್ದ ಇಬ್ಬರಿಗೆ ಶಿವಮೊಗ್ಗ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ
ಮೆಸ್ಕಾಂನಲ್ಲಿ ಉದ್ಯೋಗವಕಾಶ ಪಡೆದುಕೊಂಡ ವಿಚಾರ ಇದು 2016 ರ ನವೆಂಬರ್‌ನಲ್ಲಿ ದಾವಣಗೆರೆಯ ಇಬ್ಬರು ಯುವಕರು ಮೆಸ್ಕಾಂನ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಕೆಲಸಕ್ಕೆ ಜಾಯಿನ್ ಆಗುವ ಸಂದರ್ಭದಲ್ಲಿ MESCOMಗೆ SSLC ಯ ಮೂಲ ಅಂಕಪಟ್ಟಿಯ ಬದಲಾಗಿ ಜೆರಾಕ್ಸ್ ಅಂಕಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆದು ಕೇಸ್ ಆಗಿತ್ತು. ಅಲ್ಲದೆ ಜಯನಗರ ಪೊಲೀಸ್ ಠಾಣೆಯಲ್ಲಿ FIR ಸಹ ದಾಖಲಾಗಿತ್ತು. ಅಂದಿನ ಪಿಎಸ್‌ಐ ಹಾಲಿ ತೀರ್ಥಹಳ್ಳಿ ಪಿಯೈ ಇಮ್ರಾನ್ ಬೇಗ್‌ರವರು ಈ ಸಂಬಂಧ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
4 ನೇ ಹೆಚ್ಚುವರಿ ಸಿ,ಜೆ & ಜೆ,ಎಮ್,ಎಫ್,ಸಿ ನ್ಯಾಯಾಲಯ
ಪ್ರಕರಣ ಸಂಬಂಧ 4 ನೇ ಹೆಚ್ಚುವರಿ ಸಿ,ಜೆ & ಜೆ,ಎಮ್,ಎಫ್,ಸಿ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕ ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ಮುಗಿದು ಮೊನ್ನೆ ದಿನಾಂಕಃ 26-03-2025 ರಂದು ತೀರ್ಪು ಹೊರಬಿದ್ದಿದೆ.
ಕೋರ್ಟ್ ಆರೋಪಿ 1) ಗಣೇಶ್ ಗೌಡ ಬಿ.ಜಿ.ಎಂ, 2) ಬಿ.ಬಿ. ಗೀರಿಶ್ ರನ್ನು ಅಪರಾಧಿ ಎಂದು ಘೊಷಿಸಿದ್ದು, ಆರೋಪಿತರಿಗೆ ಕಲಂ 420 ಸಹಿತ 34 ಐಪಿಸಿ ಗೆ 2 ವರ್ಷ ಸಜೆ 4000 ರೂ ದಂಡ ಹಾಗೂ ಕಲಂ 465 ಐಪಿಸಿ ಗೆ 6 ತಿಂಗಳು ಸಜೆ ಹಾಗೂ ಕಲಂ 468 ಸಹಿತ 34 ಐಪಿಸಿಗೆ 2 ವರ್ಷ ಸಜೆ ಹಾಗೂ 4000 ರೂ ಮತ್ತು ಕಲಂ 471 ಸಹಿತ 34 ಐಪಿಸಿಗೆ 6 ತಿಂಗಳ ಕಾಲ ಸಜೆ ಶಿಕ್ಷೆ ವಿಧಿಸಿದೆ