ಟ್ರೈನ್‌ ಹೊರಟ ಮೇಲೆ ಇಳಿಬೇಡಿ | ಇಲ್ಲಿ ಜಸ್ಟ್‌ ಮಿಸ್‌ ಜೀವ | ವಿಡಿಯೋ ನೋಡಿ ಜಾಗ್ರತೆ ವಹಿಸಿ!

davanagere news today

ಟ್ರೈನ್‌ ಹೊರಟ ಮೇಲೆ ಇಳಿಬೇಡಿ | ಇಲ್ಲಿ ಜಸ್ಟ್‌ ಮಿಸ್‌ ಜೀವ | ವಿಡಿಯೋ ನೋಡಿ ಜಾಗ್ರತೆ ವಹಿಸಿ!
davanagere news today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 5, 2025 ‌‌ ‌

ರೈಲು ಚಲಿಸುವ ವೇಳೆ, ಅದನ್ನು ಹತ್ತುವ ಅಥವಾ ಅದರಿಂದ ಇಳಿಯುವ ಪ್ರಯತ್ನಗಳು ಸಾಕಷ್ಟು ಸಲ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ಅಪಾಯದ ಸಂದರ್ಭದಲ್ಲಿ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ದೈರ್ಯ ಸಾಹಸ ತೋರಿ, ಪ್ರಯಾಣಿಕರನ್ನು ಬಚಾವ್‌ ಮಾಡುವ ದೃಶ್ಯಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಸದ್ಯ ಇಂತಹ ದೃಶ್ಯವೊಂದು ದಾವಣಗೆರೆಯ ಜಿಲ್ಲೆ ರೈಲ್ವೆ ನಿಲ್ದಾಣದಲ್ಲಿ ಕಾಣ ಸಿಕ್ಕಿದೆ.  ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯುವಾಗ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ಇಲ್ಲಿನ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 


ಕಳೆದ ಭಾನುವಾರ ನಡೆದ ಘಟನೆ ಇದಾಗಿದೆ. ಯಶವಂತಪುರ-ವಿಜಯಪುರ ರೈಲಿನಲ್ಲಿ ವಿಜಯಪುರ ನಿವಾಸಿ ಪ್ರಶಾಂತ್‌ ಎಂಬವರು ಪ್ರಯಾಣಿಸುತ್ತಿದ್ದರು. ರೈಲು ದಾವಣಗೆರೆ ನಿಲ್ದಾಣದಲ್ಲಿ ನಿಂತು ಹೊರಡುವ ಸಂದರ್ಭದಲ್ಲಿ ಪ್ರಶಾಂತ್‌ರವರು ರೈಲಿನಿಂದ ಇಳಿಯಲು ಮುಂದಾಗಿದ್ದರು. ಆದರೆ ವಿಕಲಚೇತನರು ಆಗಿರುವ ಅವರಿಗೆ ರೈಲಿನಿಂದ ಕೆಳಕ್ಕೆ ಇಳಿಯಲಾಗದೆ, ಕೆಳಕ್ಕೆ ಬಿದ್ದರು. ತಕ್ಷಣವೇ ಅಲ್ಲಿದ್ದ ಆರ್‌ಪಿಎಫ್‌ ಹೆಡ್‌ ಕಾನ್‌ಸ್ಟೇಬಲ್‌ ಸತೀಶ್‌ರವರು ಪ್ರಶಾಂತ್‌ರವರ ಹೆಗಲಿಗೆ ಎರಡು ಕೈಗಳನ್ನು ಹಾಕಿ ಅವರನ್ನು ಎಳೆದಿದ್ದಾರೆ. ಹೀಗಾಗಿ ಪ್ರಶಾಂತ್‌ರವರು ಅಪಾಯದಿಂದ ಪಾರಾದರು.