SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 12, 2025
ಶಿವಮೊಗ್ಗ | ಮಾರ್ಚ್ 21 ರಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಈ ಕಾಂತೇಶ್‌ರವರ ತಮ್ಮ 45 ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಮಾರ್ಚ್ 21 ರಿಂದ 23 ರ ವರೆಗೆ ಯುವೋತ್ಸವ ಎಂಬ ಕಾರ್ಯಕ್ರಮದಡಿಯಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದೇವೇ ಎಂದು ಮಾಜಿ ಮಹನಗರ ಪಾಲಿಕೆ ಸದಸ್ಯ ವಿಶ್ವಾಸ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಈ ಕಾಂತೇಶ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸಾಕಷ್ಟು ಅಬಿವೃದ್ಧಿ ಕಾರ್ಯಕ್ರಮವನ್ನು ಮಾಡಿದ್ದಾರೆ. ಆದ್ದರಿಂದ ಅವರ ಈ 45ನೇ ಹುಟ್ಟುಹಬ್ಬದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು. ಕ್ರೀಡಾ ಕೂಟವನ್ನು ಹಮ್ಮಿಕೊಡಿದ್ದೇವೆ. ಮಾರ್ಚ್ 21 ರ ಸಂಜೆ ಪುರುಷ ಮತ್ತು ಮಹಿಳೆಯರಿಗೆ ಜಿಲ್ಲಾ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಹಾಗೂ ಮಹಿಳೆಯರಿಗಾಗಿ ಥ್ರೋ ಬಾಲ್ ಪಂದ್ಯಾವಳಿಯನ್ನು ಅಯೋಜಿಸಿದ್ದೇವೆ. ಹಾಗೆಯೇ ಮಾರ್ಚ್ 22 ಹಾಗೂ 23 ರಂದು ಏನ್ ಇ ಎಸ್ ಕ್ರೀಡಾಂಗಣದಲ್ಲಿ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೇವೆ. ಟಿನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ 50ಸಾವಿರ ರೂ ಪ್ರಥಮ ಬಹುಮಾನವಿದ್ದು, ದ್ವಿತೀಯ ಬಹುಮಾನ ಪಡೆದವರಿಗೆ 25 ಸಾವಿರ ರೂ ನಿಗದಿ ಪಡಿಸಲಾಗಿದೆ. ಈ ಕ್ರೀಡಾಕೂಟಕ್ಕೆ ಶಿವಮೊಗ್ಗದ ಜಿಲ್ಲೆಯ ಆಟಗಾರರಿಗೆ ಮಾತ್ರ ಪ್ರವೇಶವಿದ್ದು, ಆಟಗಾರರು ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ ಎಂದರು.
ಹಾಗೆಯೇ ಅಂದು ಕೆ ಈ ಕಾಂತೇಶ್‌ರವರ 45 ನೇ ಹುಟ್ಟು ಹಬ್ಬದ ಅಂಗವಾಗಿ 45 ಜನ ನದುವೆಯಾಗಿ 50 ವರ್ಷ ಪೂರೈಸಿದ ಜೋಡಿಯನ್ನು ಕರೆಸಿ ಅವರ ಪಾದ ಪೂಜೆಯನ್ನು ಹಾಗೆಯೇ 10 ಜನ ಸ್ವಾಮೀಜಿಯವರು ಪಾದ ಪೂಜೆಯನ್ನು ಮಾಡಲಾಗುತ್ತದೆ ಎಂದರು.
22 ರಂದು ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟರಾದ ಶರಣ್ ಆಗಮಿಸಲಿದ್ದಾರೆ ಎಂದರು.
SUMMARY | Vishwas, a former Mahanagara Palike member, said, “We have organised various sports under a programme called Yuvotsav from March 21 to 23.
KEYWORDS | Vishwas, birthday, Yuvotsav sports shivamogga