SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
ಮಹಿಳೆ ವಾಕಿಂಗ್ ಮಾಡುವಾಗ ದರೋಡೆಕೋರನೊಬ್ಬ ಬೈಕ್‌ನಲ್ಲಿ ಬಂದು ಸರಎಳೆದೊಯ್ದ ಘಟನೆ ಪುಣೆಯ ಚಂದನ್ ಪೇಟೆಯಲ್ಲಿ ನಡೆದಿದೆ. ಕಳ್ಳತನದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇತ್ತೀಚಿನ ದಿನಗಲ್ಲಿ ದರೋಡೆ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಇದರ ನಡುವೆ ಕಳ್ಳರು ಹೆಚ್ಚಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮಹಿಳೆಯರಿಂದ ಬಂಗಾರ ಹಾಗೂ ನಗದುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಆದರಲ್ಲೂ ವಾಕಿಂಗ್ ಹೋಗುತ್ತಿರುವಾಗ ಕಳ್ಳರು ಮಹಿಳೆಯರು ಕುತ್ತಿಗೆಗೆ ಕೈಹಾಕಿ ಕ್ಷಣ ಮಾರ್ಗದಲ್ಲಿ ಬಂಗಾರವನ್ನು ಎಳೆದೊಯ್ಯುತ್ತಾರೆ. ಇದರಿಂದ ಅನೇಕರು ಪ್ರಾಣ ಹೋಗಿರುವ ಉದಾಹರಣೆಗಳು ಇದೆ. ಇದೀಗ ಅದೇ ರೀತಿ ಕಳ್ಳತನದ ಪ್ರಕರಣ ಪುಣೆಯ ಚಂದನ್ ಪೇಟೆಯಲ್ಲಿ ನಡೆದಿದೆ.
शहरात मंगळसूत्र चोरांचा सुळसुळाट.कर्वेनगर मधे आज सकाळी जेष्ठ महिलेचे मंगळसूत्र हिसकावून नेले.हिसकवताना अर्धा भाग तुटून खाली पडला,चोरटा बिनधास्त मागे आला, पडलेला भाग उचलून नेला..ना कोणाचे भय..ना कायद्याचा धाक. शहरातील पोलीस presence कमी होत चाललाय? @PuneCityPolice@Dev_Fadnavis pic.twitter.com/dwiwkilPzI
— Archana More-Patil (@Archana_Mirror) January 22, 2025
ವಿಡಿಯೋದಲ್ಲಿರುವಂತೆ ಇಬ್ಬರು ಮಹಿಳೆಯರು ಬೆಳಗ್ಗಿನ ಜಾವ ವಾಕಿಂಗ್ ಹೊರಟಿರುತಾರೆ. ಆಗ ಕಳ್ಳನೊಬ್ಬ ಬೈಕ್‌ನಲ್ಲಿ ಬಂದು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರವನ್ನು ಎಳೆದಿದ್ದಾನೆ. ಎಳೆದ ರಬಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದಾರೆ. ಹಾಗೆಯೇ ಸರವೂ ಕೂಡ ಮೊದಲ ಬಾರಿಗೆ ಕಳ್ಳನ ಕೈಗೆ ಸಿಗದೆ ತುಂಡಾಗಿ ನೆಲದ ಮೇಲೆ ಬಿದ್ದಿದೆ. ಇದರಿಂದಾಗಿ ಬೈಕ್‌ನಲ್ಲಿ ಮುಂದೆ ಹೋದ ಕಳ್ಳ ಪುನಃ ಹಿಂದೆ ಬಂದು ಕೆಳಗೆ ಬಿದ್ದ ಸರವನ್ನು ತೆಗೆದು ಕೊಂಡು ಪರಾರಿಯಾಗಿದ್ದಾನೆ.
SUMMARY | A woman was walking when a robber on a bike snatched her chain in Pune’s Chandanpet.
KEYWORDS | robber, Pune, chain, snatched,