SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 22, 2025
ನಿನ್ನೆ ರಾತ್ರಿ ಕುಡುಕನೊಬ್ಬ ಕಂಠಪೂರ್ತಿ ಕುಡಿದು ಟೈಟ್ ಆಗಿ ಬಸ್ ಸ್ಟಾಂಡ್ ನಲ್ಲಿ ಗಲಾಟೆ ಆಗಿ ತುಂಬಾ ಪೆಟ್ಟಾಗಿದೆ ಬನ್ನಿ ಎಂದು ಆಂಬ್ಯುಲೆನ್ಸ್ ಕರೆಸಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ನಡೆದಿದೆ.
ಈ ಹಿನ್ನಲೆ ಶೃಂಗೇರಿ ಹಾಗು ಕೊಪ್ಪದಲ್ಲಿರುವ ಆಂಬ್ಯುಲೆನ್ಸ್ ಬೇರೆ ರೋಗಿಗಳನ್ನು ಕರೆದುಕೊಂಡು ಹೋಗಿದ್ದ ಕಾರಣ 40 ಕಿಲೋಮೀಟರ್ ದೂರವಿರುವ ಬಾಳೆಹೊನ್ನೂರಿನಿಂದ 108 ಆಂಬ್ಯುಲೆನ್ಸ್ ಬಂದಿದೆ. ಆದರೆ ಇಲ್ಲಿ ಬಂದು ನೋಡಿದಾಗ ಆಂಬುಲೆನ್ಸ್ ಸಿಬ್ಬಂದಿಗೆ ಯಾರು ಪೆಟ್ಟಾದ ಗಾಯಾಳುಗಳು ಕಾಣಲಿಲ್ಲ. ಆಗ ಸಿಬ್ಬಂದಿಗೆ ಕುಡುಗನ ಚೇಷ್ಠೆಯ ಅರಿವಾಗಿದೆ. ಇದರಿಂದ ಕೋಪಗೊಂಡ ಆಂಬ್ಯುಲೆನ್ಸ್ ಸಿಬ್ಬಂದಿಗಳು 112 ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಪೊಲೀಸರು ಸ್ಥಳಕ್ಕೆ ಬಂದು ಕುಡುಕನ ನಂಬರ್ ತೆಗೆದುಕೊಂಡು ಆತನಿಗೆ ಕಾಲ್ ಮಾಡಿದಾಗ ಆತ ನಾನು ಭೂಮಿ ಮೇಲೆ ಇಲ್ಲ, ಆಕಾಶದ ಕೆಳಗೆ ಇದ್ದೀನಿ. ತಾಕತ್ತಿದ್ದೆ ನನ್ನ ಹಿಡೀರಿ ನೋಡೋಣ ಎಂದು ತಲೆಹರಟೆ ಮಾತುಗಳನ್ನಾಡಿದ್ದಾನೆ. ನಂತರ ಪೊಲೀಸರು ಈತನನ್ನು ಹುಡುಕಿದ್ದು, ಸಿಕ್ಕಿಹಾಕಿಕೊಂಡ ಕುಡುಕ ತಪ್ಪಾಯ್ತು ಬಿಡಿ ಸಾರ್ ಎಂದು ಪೊಲೀಸರ ಬಳಿ ಗೋಗರೆದಿದ್ದಾನೆ.
SUMMARY | The incident took place at Sringeri in Chikkamagaluru when an ambulance was called in to inform that there was a scuffle at the bus stand.
KEYWORDS | Sringeri, Chikkamagaluru, ambulance, Drunk man,