ಕುಡಿದ ಅಮಲಿನಲ್ಲಿ ಸ್ನೇಹಿತನನ್ನು ಕೊಂದು ಪಶ್ಚಾತಾಪ ಪಟ್ಟನೆ ಗೆಳೆಯ..?

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 2, 2025

ಸ್ನೇಹಿತರಿಬ್ಬರು ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡು ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೇವರಾಜು (31) ಕೊಲೆಯಾದ ದುರ್ದೈವಿ.

- Advertisement -

ಇಂದು ಮಧ್ಯಾಹ್ನ ತ್ಯಾವರೆಕೊಪ್ಪ  ಬಳಿ ದೇವರಾಜ್‌ ಹಾಗೂ ವೆಂಕಟೇಶ್‌ ಒಟ್ಟಿಗೆ ಕುಡಿದಿದ್ದಾರೆ. ಕುಡಿದ ಅಮಲಿನಲ್ಲಿ ಅವರಿಬ್ಬರ ನಡುವೆ ಏನೋ ಮಾತಿನ ಚಕಮಕಿ ನಡೆಯಿತೋ ಗೊತ್ತಿಲ್ಲ, ವೆಂಕಟೇಶ್‌ ಗುದ್ದಲಿಯಿಂದ ದೇವರಾಜ್‌ ಮೇಲೆ ಹಲ್ಲೆ  ನಡೆಸಿ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ದೇವರಾಜ್‌ ಸಾವನ್ನಪ್ಪಿದ್ದಾನೆ. ಆರೋಪಿ ವೆಂಕಟೇಶ್ ನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸ್ನೇಹಿತನನ್ನು ಕೊಂದ ವೆಂಕಟೇಶ್‌ ಪೊಲೀಸ್‌ ಠಾಣೆಯಲ್ಲಿ ಕಣ್ಣೀರಿಡುತ್ತಾ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಪಡೆಯುತ್ತಿದ್ದಾನೆ.

SUMMARY | Two friends, who were in an inebriated state, had a fight and ended up in a murder in Shivamogga rural police limits.

KEYWORDS | fight murder,   Shivamogga, Two friends,

Share This Article