SHIVAMOGGA | MALENADUTODAY NEWS | ಮಲೆನಾಡು ಟುಡೆ |Jan 2, 2025
ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕಾಲೇಜು ಬದಲಾಯಿಸಲು ಹೇಳಿದ ಪೋಷಕರನ್ನೇ ಕೊಲೆಮಾಡಿದ್ದಾನೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 25 ವರ್ಷದ ಉತ್ಕರ್ಷ ದಾಖೋಲೆ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ಉತ್ಕರ್ಷ ಪದೇ ಪದೇ ಇಂಜಿನಿಯರಿಂಗ್‌ನಲ್ಲಿ ಫೇಲ್ ಆಗುತ್ತಿದ್ದ. ಇದರಿಂದ ಆತನ ತಂದೆ ತಾಯಿ ನೀನು ಆ ಕಾಲೇಜನ್ನು ಬದಲಾಯಿಸು ಎಂದು ಹಲವಾರು ಬಾರಿ ಬುದ್ದಿವಾದ ಹೇಳಿದ್ದರು. ಇದರಿಂದ ಒತ್ತಡಕ್ಕೆ ಒಳಗಾದ ಯುವಕ ಮೊದಲು ತನ್ನ ತಾಯಿ ಅರುಣಾರನ್ನು ಕತ್ತು ಹಿಸುಕಿ ಕೊಂದು ನಂತರ ತಂದೆ ಲೀಲಾಧರ್ ರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಡಿ.26 ರಂದು ನಡೆದಿದ್ದು, ಅಕ್ಕಪಕ್ಕದ ಜನ ರೂಮಿನಲ್ಲಿ ಏನೋ ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಜನವರಿ 1 ರಂದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ವಿಚಾರಿಸಿದಾಗ ಈ ವಿಷಯ ತಿಳಿದು ಬಂದಿದೆ.
SUMMARY | An engineering student allegedly killed his parents who asked him to change his college for failing in an examination.
KEYWORDS | engineering, student, parents, crime,