SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗ | ಮಲೆನಾಡು ಬಯಲು ಸೀಮೆಯಲ್ಲಿಗ ಹೋರಿ ಹಬ್ಬದ ಕಲರವ. ಈಗಾಗಲೇ ಹಲವೆಡೆ ಭರ್ಜರಿ ಹೋರಿಹಬ್ಬ ನಡೆದಿದ್ದು, ಇನ್ನೂ ಹಲವೆಡೆ ಹೋರಿ ಹಬ್ಬಕ್ಕೆ ನಿಕ್ಕಿಯಾಗಿವೆ. ಸಾಲೂರು, ತಾವರೆಕೊಪ್ಪದಲ್ಲಿ ಯಶಸ್ವಿಯಾಗಿ ಹೋರಿ ಹಬ್ಬಗಳು ನಡೆದಿದ್ದು ಶಿಕಾರಿಪುರ, ಸೊರಬ, ಹುಲಿಗಿನಕೊಪ್ಪ, ಯಳವಳ್ಳಿ ಸೇರಿದಂತೆ ಹಲವೆಡೆ ಹೋರಿ ಹಬ್ಬ ನಿಕ್ಕಿಯಾಗಿದೆ.
ಲಕ್ಷ ಲಕ್ಷ ವಹಿವಾಟು

ಮಲೆನಾಡ ಆರ್ಥಿಕತೆಯ ಚಟುವಟಿಕೆಯು ಆಗಿರುವ ಹೋರಿಹಬ್ಬಗಳಲ್ಲಿ ಲಕ್ಷಗಟ್ಟಲೇ ವಹಿವಾಟು ನಡೆಯುತ್ತದೆ. ಹೋರಿಹಬ್ಬಕ್ಕೆ ತರುವ ಹೋರಿಯ ದರಗಳು ಹುಬ್ಬೆರಿಸುತ್ತವೆ. ಇನ್ನೊಂದಡೆ ಅವುಗಳಿಗೆ ಮಾಡುವ ಖರ್ಚುಗಳು ಪ್ರತಿಷ್ಟೆಯ ವಹಿವಾಟಾಗುತ್ತದೆ. ಅದರಲ್ಲಿಯೂ ಈ ಸಲ ಹೋರಿಹಬ್ಬ ದುಬಾರಿಯಾದಂತಿದೆ. 80 ಸಾವಿರ ರೂಪಾಯಿ ಹೋರಿಯಿಂದ ಹಿಡಿದು ನಾಲ್ಕು ಲಕ್ಷ ರೂಪಾಯಿಯ ಹೋರಿಯವರೆಗೂ ಹಲವು ಹೋರಿಗಳು ಹೋರಿ ಹಬ್ಬದಲ್ಲಿ ದಿಮ್ಮನೆ ರಂಗ ಎಂದು ಓಡುತ್ತಿವೆ.
ಹೋರಿ ನಂಬರ್‌ಗೆ ಡಿಮ್ಯಾಂಡ್
ವಿಶೇಷ ಅಂದರೆ, ಹೋರಿಹಬ್ಬದಲ್ಲಿ ಹೋರಿಗಳಿಗೆ ನೀಡುವ ನಂಬರ್‌ಗಳಿಗೂ 5- 6 ಸಾವಿರ ರೂಪಾಯಿವರೆಗೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈ ಸಲ ಹೋರಿಹಬ್ಬದ ಆಯೋಜಕರು ನಿರ್ದಿಷ್ಟ ನಂಬರ್‌ಗಳಿಗಾಗಿ ಹೆಚ್ಚುವರಿ ಹಣವನ್ನ ನಿಗದಿಪಡಿಸಿದ್ದು, ಇದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ತಮಿಳುನಾಡು ಮೂಲದ ಹೋರಿಗಳು ಹಾಗೂ ಹಳ್ಳಿಕಾರ್ ಹೋರಿಗಳು ಈ ಸಲದ ಹೆಚ್ಚುವರಿ ಅಟ್ರಾಕ್ಷನ್ ಆಗಿದ್ದು ಈ ಪೈಕಿ ಹಳ್ಳಿಕಾರ್ ಹೋರಿಗಳಿಗೆ ಹೆಚ್ಚು ಡಿಮ್ಯಾಂಡ್ ಇದೆ. ಅವುಗಳ ಆಕಾರ ಹಾಗೂ ಅವುಗಳು ಓಡುವ ಪರಿಯನ್ನು ನೋಡಲೆಂದೆ ಹಲವರು ಹೋರಿಹಬ್ಬಗಳಿಗೆ ಬರುತ್ತಿದ್ದಾರೆ. ಇದನ್ನ ಹೊರತು ಪಡಿಸಿದರೇ ಅಮೃತ್ ಮಹಲ್ ಹೋರಿಗಳು ಹೋರಿ ಹಬ್ಬದಲ್ಲಿ ಸದ್ದು ಮಾಡುತ್ತಿದೆ.
ಹೋರಿ ಖರ್ಚೆಷ್ಟು ಗೊತ್ತಾ
ಸಾಮಾನ್ಯವಾಗಿ ಒಂದು ಹೋರಿಯನ್ನ ಹೋರಿಹಬ್ಬಕ್ಕೆ ತರುವುದಕ್ಕೆ ಅಂದಾಜು 15 ಸಾವಿರ ಖರ್ಚಾಗುತ್ತದೆ. ಹೋರಿಯ ಸಾಗಾಟದ ಖರ್ಚು, ಹುಡುಗರ ವೆಚ್ಚ, ಪಿಪಿ ಕಟ್ಟು ಖರ್ಚು, ನಂಬರ್ ಪಡೆಯುವ ಖರ್ಚು ಹೀಗೆ ಹೋರಿಯನ್ನ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸಹ ದುಬಾರಿ ಖರ್ಚಿನ ಬಾಬ್ತಾಗಿದೆ. ಆದಾಗ್ಯು ಮಲೆನಾಡಲ್ಲಿ ಹೋರಿಹಬ್ಬಕ್ಕೆ ಈ ಸಲ ಭರ್ಜರಿ ಕ್ರೇಜ್ ಇದ್ದು, ಇತ್ತೀಚೆಗೆ ನಡೆದ ಹೋರಿಹಬ್ಬಗಳಲ್ಲಿ 300 ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿರುವುದು ಹೋರಿಹಬ್ಬದ ಬಗೆಗಿನ ಜನರ ಒಲವಿಗೆ ಸಾಕ್ಷಿಯಾಗಿದೆ. ಇನ್ನೂ ಈ ಪಂದ್ಯಾವಳಿಯಲ್ಲಿ ಗೆದ್ದ ಹೋರಿಗಳನ್ನ ಮೆರವಣಿಗೆ ಮೂಲಕ ತಮ್ಮೂರಿಗೆ ಸಾಗಿಸ್ತಿರುವ ಯುವಕರು ಅದಕ್ಕಾಗಿಯೇ ಸಾವಿರಗಟ್ಟಲೇ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಹಣಕ್ಕಿಂತಲೂ ಪ್ರತಿಷ್ಟೆ ಗೌರವ ಹಾಗೂ ಮರ್ಯಾದೆಯ ವಿಷಯವಾಗಿ ಹೋರಿಹಬ್ಬ ಈ ಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ.
ಹೋರಿಗೆ ರಾಜಮೆರವಣಿಗೆ
ಹಲವು ಹೋರಿ ಹಬ್ಬಗಳಲ್ಲಿ ಯಾರ ತೆಕ್ಕೆಗೂ ಸಿಗದೇ ಚಿನ್ನ, ಪ್ರಿಜ್ಜು, ವಾಷಿಂಗ್ ಮಷಿನ್, ಗ್ರೋದ್ರೇಜ್ ಬೀರು ಹೀಗೆ ಲಾಟುಗಟ್ಟಲೇ ಪ್ರೈಜ್ ಹೊಡೆದ ಹೋರಿಗಳು ಒಂದು ಹಂತದ ಎಕ್ಸಿಪಿರಿಯನ್ಸ್ ಪಡೆದುಕೊಂಡ ಮೇಲೆ ಅವುಗಳನ್ನ ಹಿಡಿಯಲು ಹೋಗದೇ ಜನರು ಅದಕ್ಕೆ ರಾಜಮರ್ಯಾದೆಯನ್ನು ನೀಡುತ್ತಾರೆ. ಅಂತಹ ಕ್ರೇಜ್ ನೋಡುವುದೇ ಚೆಂದ . ಅದರಲ್ಲಿಯೂ ಹೋರಿಗಳಿಗೆ ಇಡುವ ಚಿತ್ರ ವಿಚಿತ್ರ ಹೆಸರುಗಳು ಅವುಗಳ ಹೆಸರಲ್ಲಿ ಇನ್‌ಸ್ಟಗ್ರಾಂ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಸೃಷ್ಟಿಯಾಗುವ ಫ್ಯಾನ್ಸ್ ಗ್ರೂಪ್‌ಗಳು ಹೋರಿಹಬ್ಬಕ್ಕೆ ಟ್ರೆಂಡಿಂಗ್ ಟಚ್ ಕೊಟ್ಟಿದೆ.
ಹೋರಿ ವಿಡಿಯೋ ಫೋಟೋಗೂ ಫುಲ್ ಬೇಡಿಕೆ
ವಿಶೇಷ 13 ಸೇಕೆಂಡ್‌ನಲ್ಲಿ ಹೋರಿಯೊಂದು ಓಡುವ ರೀತಿಯನ್ನ ಚಿತ್ರೀಕರಿಸಿ, ಸ್ಥಳದಲ್ಲಿಯೇ ಅದಕ್ಕೆ ಮ್ಯೂಸಿಕ್ ಎಫೆಕ್ಟ್ ಬಳಿ ರೀಲ್ಸ್ ಮಾಡಿಕೊಡುವವರಿಗೆ ಸಖತ್ ಡಿಮ್ಯಾಂಡ್ ಇದೆ. ಹೋರಿಹಬ್ಬದಲ್ಲಿ ಇದರ ಗುತ್ತಿಗೆಯನ್ನ ಪಡೆಯುವ ತಂಡಗಳು, ಕಠಿಣವಾದ ಸನ್ನಿವೇಶ ಹಾಗೂ ಸ್ಥಳದಲ್ಲಿ ನಿಂತು ಹೋರಿಗಳ ವಿಜ್ರಂಭಣೆಯ ದೃಶ್ಯಗಳನ್ನ ಸೆರೆ ಹಿಡಿದು ಅದರ ಮಾಲೀಕರಿಗೆ ನೀಡುತ್ತಾರೆ. ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ರಾಯಲ್ ಆಗಿ ವೀವ್ಸ್ ಪಡೆದುಕೊಳ್ಳುತ್ತದೆ.
ಪಿಪಿ ಕಟ್ಟುವುದು ಸಹ ಕಲೆ
ಇನ್ನು ಹೇಳಬೇಕಂದರೆ, ಮೊದಲೆಲ್ಲಾ ಮಲೆನಾಡಿನಲ್ಲಿ ಹೋರಿಗಳಿಗೆ ಪೀಪಿಗಳನ್ನ ಅಷ್ಟಾಗಿ ಕಟ್ಟುತ್ತಿರಲಿಲ್ಲ. ಮಲ್ನಾಡ್‌ನಲ್ಲಿ ಹಾಯುವ ಹೋರಿಗಳು ಹೆಚ್ಚಾಗಿದ್ದವು. ಹಾವೇರಿ ಭಾಗದಲ್ಲಿ ಪಿಪಿ ಹೋರಿಗಳ ಕ್ರೇಜ್ ಹೆಚ್ಚಾಗಿದ್ದವು. ಇದೀಗ ಈ ಕ್ರೆಜ್ ಮಲ್ನಾಡ್‌ನಲ್ಲಿಯು ಜೋರಾಗಿದೆ. ಆದರೆ ಪಿಪಿ ಹೋರಿಗಳನ್ನ ತಯಾರು ಮಾಡುವುದು ಸುಲಭದ ಕೆಲಸವಲ್ಲ. ಪಿಪಿ ಹೋರಿಗಳಿಗೆ ಹಬ್ಬಕ್ಕೂ ಕೆಲವು ತಿಂಗಳು ಮೊದಲೇ ಈ ಪ್ರಾಕ್ಟಿಸ್ ನೀಡಲಾಗುತ್ತದೆ. ಅವುಗಳ ಕೊಂಬಿಗೆ ಮರಳು ಚೀಲ ಕಟ್ಟಿ, 20 ಅಡಿಯ ಪಿಪಿಗಳನ್ನ ಹೊರುವ ಸಾಮರ್ಥ್ಯವನ್ನು ಕಲಿಸಲಾಗುತ್ತದೆ. ಪಿಪಿ ಕಟ್ಟಿದಾಗ ಹೋರಿ ತನ್ನ ಚೆಂಡು ಕೆಳಕ್ಕೆ ಹಾಕಬಾರದು ಎಂದು ಈ ರೀತಿ ತರಭೇತಿ ನೀಡಲಾಗುತ್ತದೆ. ಆನಂತರ ಹೋರಿಹಬ್ಬದ ಸಂದರ್ಭದಲ್ಲಿ ಪಿಪಿ ಕಟ್ಟುವ ನಿಪುಣ ಕಲಾವಿದರಿಂದ ಗರಿಷ್ಟ 20 ಅಡಿ ಎತ್ತರ ಪಿಪಿಗಳನ್ನ ಹೋರಿಗಳಿಗೆ ಕಟ್ಟಲಾಗುತ್ತದೆ.
ಮಹಾರಾಜರ ಕಿರೀಟದ ರೀತಿಯಲ್ಲಿ ಪಿಪಿಗಳನ್ನ ಕಟ್ಟಿ, ಹೂವುಗಳಿಂದ ಸಿಂಗರಿಸುವ ಹೋರಿ ನೆಗೆಯುತ್ತಾ ಓಡುವಾಗ ಅದರ ಸದು ಎದೆ ಝಲ್ ಎನ್ನುವಂತೆ ಮಾಡುತ್ತದೆ. ಆ ದೃಶ್ಯಗಳನ್ನ ಇದೀಗ ಮಲೆನಾಡ ಮಂದಿ ಊರೂರಿಗೆ ಹೋಗಿ ನೋಡುತ್ತಿದ್ದಾರೆ. ಸಾವಿರಾರು ಮಂದಿ ಸೇರುವ ಹೋರಿಹಬ್ಬ ಬ್ಯುಸಿ ವ್ಯಾಪಾರದ ಕೇಂದ್ರವಾಗಿ ಮಾರ್ಪಟ್ಟಿರುತ್ತದೆ.
ಕಾಣೆಯಾಗುತ್ತಿವೆ ಹೋರಿಗಳು
ಈ ನಡುವೆ ಈ ಸಲ ಹೋರಿಹಬ್ಬದಲ್ಲಿ ಹೋರಿಗಳು ಕಾಣೆಯಾಗುತ್ತಿರುವ ಬಗ್ಗೆ ಹೆಚ್ಚು ವರದಿಯಾಗುತ್ತಿವೆ. ಈ ಬಗ್ಗೆ ಮಲೆನಾಡು ಟುಡೆಗೆ ಹಲವರು ತಮ್ಮ ಹೋರಿ ಕಾಣೆಯಾಗಿದೆ ಈ ಬಗ್ಗೆ ವರದಿ ಮಾಡಿ ಎಂದು ಕೋರಿದ್ದರು. ಹೋರಿಗಳು ಕಾಣೆಯಾಗಲು ಹೇಗೆ ಸಾಧ್ಯ ಎಂದು ಹೋರಿಹಬ್ಬವನ್ನ ಹತ್ತಿರದಿಂದ ಬಲ್ಲವರ ಬಳಿ ಕೇಳಿದಾಗ, ಹೊರಜಿಲ್ಲೆಗಳು ಅಥವಾ ಕಾಡುಬದಿಯ ಹೋರಿಗಳು ಹೋರಿಹಬ್ಬದಲ್ಲಿ ಬೆದರಿ ಓಡಿ ಕೊನೆಯಗಡಿಯಲ್ಲಿ ಸಿಗದೇ ಇನ್ನೆಲ್ಲೋ ಓಡಿಹೋಗುತ್ತವೆ. ಅಂತಹ ಹೋರಿಗಳನ್ನು ಹುಡುಕುವುದು ಕಷ್ಟವಾಗುತ್ತದೆ ಎನ್ನುತ್ತಾರೆ. ಹಿಂದೆ ಕಾಣೆಯಾಗುವ ಹೋರಿಗಳು ಸಿಗುವುದು ಕಷ್ಟವಾಗುತ್ತಿತ್ತು. ಆದರೆ ಈಗೆಲ್ಲಾ ವಾಟ್ಸಾಪ್ ಗ್ರೂಪ್‌ಗಳಿಂದ ಮಿಸ್ ಆಗುವ ಹೋರಿಗಳು ಮತ್ತೆ ಮಾಲೀಕರ ಕೈಗೆ ಸಿಗುತ್ತಿವೆ. ಕೆಲವರು ಹೋರಿ ಸಿಕ್ಕಿದೆ ಮಾಲೀಕರು ಬನ್ನಿ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಹಾಕುತ್ತಾರೆ. ಮತ್ತೆ ಕೆಲವರು ಹೋರಿ ಕಳೆದು ಹೋಗಿದೆ ಸಿಕ್ಕರೆ ತಿಳಿಸಿ ಎಂದು ಪ್ರಕಟಿಸಿರುತ್ತಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ರವಾನೆಆಗಿ ಹೋರಿ ಸಿಗುತ್ತದೆ ಎನ್ನುವುದು ಹೋರಿಹಬ್ಬದ ಮಂದಿಯ ಅಭಿಪ್ರಾಯ
ಸಾಮಾನ್ಯವಾಗಿ ಓಡಲು ಬಿಟ್ಟ ಹೋರಿಗಳನ್ನ ಹಿಡಿಯಲು ಅದರ ಕಡೆಯವರು ಹಬ್ಬದ ಸಾಲಿನ ಕೊನೆಗಡಿಯಲ್ಲಿ ನಿಂತಿರುತ್ತಾರೆ. ಸ್ಪೀಡಾಗಿ ಓಡಿ ಬರುವ ಹೋರಿಗಳನ್ನ ಬಲೆ ಅಥವಾ ಕೊಕ್ಕೆ ಬಳಸಿ ಹಿಡಿಯುತ್ತಾರೆ. ಆದರೆ ಕೆಲವೊಂದು ಹೋರಿಗಳು ಇದಕ್ಕೆ ಸಿಗದೇ ಎಲ್ಲಿಗೋ ತಪ್ಪಿಸಿಕೊಂಡು ಓಡಿಬಿಡುತ್ತವೆ. ಅವುಗಳನ್ನ ಹುಡುಕುವುದೇ ತ್ರಾಸಿನ ಕೆಲಸವಾಗುತ್ತದೆ. ಮತ್ತೆ ಕೆಲವು ಹೋರಿ ಕಾಡು ಪಾಲಾಗುತ್ತವೆ. ಇದೇ ರೀತಿಯಲ್ಲಿ ಹೋರಿಯೊಂದು ಕಾಣೆಯಾಗಿದ್ದು ಅದರ ಬಗ್ಗೆ ವಿವರ ಇಲ್ಲಿದೆ ಈ ಹೋರಿ ಸಿಕ್ಕರೇ ಅದರ ಮಾಲೀಕರಿಗೆ ತಿಳಿಸಿ.
ಒಟ್ಟಾರೆ ಶಿವಮೊಗ್ಗದಲ್ಲಿ ಬಿಂದಾಸ್ ಹೋರಿಹಬ್ಬ ನಡೆಯುತ್ತಿದ್ದು, ಅದನ್ನ ನೋಡಲು ಸ್ಥಳೀಯವಾಗಿ ಕ್ರಿಕೆಟ್‌ಗಿಂತಲೂ ದೊಡ್ಡ ಫ್ಯಾನ್ಸ್ ಬೇಸ್ ನಿರ್ಮಾಣವಾಗಿದೆ. ನೀವು ಹೋರಿ ಹಬ್ಬದ ಫ್ಯಾನ್ಸ್ ಆಗಿದ್ದ ಮುಂಬರುವ ಹೋರಿಹಬ್ಬಗಳನ್ನ ಮಿಸ್ ಮಾಡಿಕೊಳ್ಳಬೇಡಿ. ಕೊನೆಯಲ್ಲಿ ಒಂದು ವಿಷಯ. ವಿಶೇಷವಾಗಿ ಹೋರಿಹಬ್ಬಗಳಲ್ಲಿ ಈ ಸಲ ಯಾವುದೇ ಅಪಾಯವಾಗದಂತೆ ಬಹಳಷ್ಟು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಇದರ ಜೊತೆಗೆ ಅದೃಷ್ಟವೂ ಜೊತೆಗಿದ್ದು ಸಂಭ್ರಮದಿಂದ ಹೋರಿಹಬ್ಬ ಈ ವರ್ಷ ಯಶಸ್ಸು ಕಾಣಲಿ.
SUMMARY| hori habba,rnr hori habba,hori habba 2022,hori habba live,4 krass hori habba,hanagal hori habba,hori habba live 2023,hori habba live today,ranebennur hori habba,hori habba jallikattu,hori habba live today 2024,hori habba video trending,hori,#top hori habba hamsabhavi,#ntc hori habba hamsabhavi habba,#hamsabhavi hori habba in kannada,hori abba,hori abba short video,#2024 hamsabhavi hori habba in kannada,#today hamsabhavi hori habba in kannada
KEY WORDS | hori habba,rnr hori habba,hori habba 2022,hori habba live,4 krass hori habba,hanagal hori habba,hori habba live 2023,hori habba live today,ranebennur hori habba,hori habba jallikattu,hori habba live today 2024,hori habba video trending,hori,#top hori habba hamsabhavi,#ntc hori habba hamsabhavi habba,#hamsabhavi hori habba in kannada,hori abba,hori abba short video,#2024 hamsabhavi hori habba in kannada,#today hamsabhavi hori habba in kannada