SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 11, 2025
ಚಿಕ್ಕಮಗಳೂರು | ಕ್ಷಿಪ್ರ ಕಾರ್ಯಾಚರಣೆಯಿಂದ ಕಾರ್ಕಳ ವನ್ಯಜೀವಿ ವಲಯದ ಅಧಿಕಾರಿಗಳು ಕಾಡುಕೋಣ ಬೇಟೆಯಾಡುತಿದ್ದ 3 ಆರೋಪಿಗಳನ್ನು ಬಂಧಿಸಿದ್ದಾರೆ.
ಜನವರಿ 8 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪೆಕಟ್ಟೆ ಬಳಿಯ ಮುಟ್ಟಿಕಾಯಿ ಅರಣ್ಯದಲ್ಲಿ ಹೆಣ್ಣು ಕಾಡುಕೋಣವೊಂದನ್ನು ಅಲಿ ಬಾಪು ಯಾಸಿನ್ ಎಂಬಾತ ಬೇಟೆಯಾಡಿದ್ದನು. ಈ ಹಿನ್ನಲೆ ಅರಣ್ಯಾಧಿಕಾರಿಗಳು ಬೇಟೆಯಾಡಿದವರ ಜಾಡನ್ನು ಹಿಡಿಯಲು ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಆವೇಳೆ ಅಲಿ ಎಂಬಾ ಆರೋಪಿ ಕಾಡುಕೋಣ ಹತ್ಯೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಆತನನ್ನು ಪೊಲೀಸರು ಬಂಧಿಸಿ ವಶಪಡಿಸಿಕೊಂಡಿದ್ದರು. ನಂತರ ಡಿಸಿಎಫ್ ಎಂ.ಶಿವರಾಮಬಾಬು ಅವರ ಪ್ರಯತ್ನದ ಫಲವಾಗಿ ಶಿವಮೊಗ್ಗ ಸೇರಿದಂತೆ ವಿವಿದೆಡೆ ಆದ ಕಾಡುಕೋಣ ಹತ್ಯೆಯ ಪ್ರಕರಣದ ಆರೋಪಿಳಗನ್ನು ಪತ್ತೆಹಚ್ಚಲಾಯಿತು. ಈ ವೇಳೆ ಅಲಿ ಬಾಪು ಯಾಸೀನ್ ಸೇರಿದಂತೆ ಮೊಹಮ್ಮದ್ ಅಶ್ರಫ್, ಯಾಸೀನ್ ಮತ್ತು ವಾಸಿಂ ಅಕ್ರಂ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಾರಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವಾರು ಕಾಡೆಮ್ಮೆಗಳು ಸಾವನ್ನಪ್ಪಿರುವುದು ವರದಿಯಾಗಿದೆ.
SUMMARY | In a swift operation, karkala wildlife range officials arrested three persons who were hunting bison.
KEYWORDS | karkala wildlife, swift operation, range officials, arrested,