SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 25, 2024
ಉಡುಪಿ ಜಿಲ್ಲೆಯ ಜಡ್ಕಳ್ ಎಂಬಲ್ಲಿ ನ. 24ರಂದು ರಾತ್ರಿ ಕಾಂತಾರ ಚಿತ್ರದ ಜೂನಿಯರ್ ಆರ್ಟಿಸ್ಟ್ ಗಳು ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಅಪಘಾತವಾಗಿದೆ.
20 ಜನ ಕಲಾವಿದರು ಈ ಬಸ್ ನಲ್ಲಿ ತೆರಳುತ್ತಿದ್ದು, ಅದರಲ್ಲಿ ಆರೇಳು ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಹಾಗೆಯೇ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದು ಕಾಂತಾರದ ಪ್ರೀಕ್ವೆಲ್ ಆಗಿದ್ದು, ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 2 ವಿಶ್ವದಾದ್ಯಂತ ರಿಲೀಸ್ ಆಗಲಿದೆ.
SUMMARY| The mini-bus in which the junior artistes of ‘Kanthara’ were travelling overturned at Jadkal in Udupi district on the night of November 24.
KEY WORDS| junior artistes of ‘Kanthara, rishab shetty, bus accident,