ಕಾಂಗ್ರೆಸ್‌ ಸರ್ಕಾರ ಬಹಳ ದಿನ ಅಧಿಕಾರದಲ್ಲಿ ಉಳಿಯಲ್ಲ | ಮಾಜಿ ಡಿಸಿಎಂ ಈಶ್ವರಪ್ಪ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 15, 2025

ಶಿವಮೊಗ್ಗ | ದುಷ್ಕರ್ಮಿಗಳು ಹಸುವಿನ ಕೆಚ್ಚಲನ್ನು ಕೊಯ್ದಿರುವಂತಹ ರಾಕ್ಷಸಿ ಕೃತ್ಯ ರಾಜ್ಯದಲ್ಲಿ ನಡೆದಿದೆ. ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ತುಂಬಾ ದಿನಗಳ ಕಾಲ ಅಧಿಕಾರದಲ್ಲಿ ಉಳಿಯಲ್ಲ ಎಂದು ಮಾಜಿ ಡಿ ಸಿಎಂ ಈಶ್ವರಪ್ಪ ಕಾಂಗ್ರೆಸ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹಿಂದೂಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಹಾಗೆಯೆ ಗೋವು ಹಂತಕರಿಗೆ ಬೆಂಬಲವಬನ್ನು ನೀಡುತ್ತಿದೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲ ಜಿಲ್ಲೆಗಳಲ್ಲೂ ಗೋಶಾಲೆ ಮಾಡಬೇಕೆಂದು ಕೊಂಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಕ್ಯಾಬಿನೆಟ್ ನಲ್ಲಿ ಈಗ ಆ ವಿಷಯವನ್ನು ಕೈ ಬಿಟ್ಟಿದೆ. ಇದರಿಂದ ಗೋವು ಹಂತಕರಿಗೆ ಕುಮ್ಮಕ್ಕು ಸಿಕ್ಕಿ  ಇಂದು ಗೋವಿನ ಕೆಚ್ಚಲನ್ನು ಕಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ  ಕಟ್ಟಿಗೆಯಿಂದ ಕಾಲಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಇದೊಂದು ರಾಕ್ಷಸಿ ಕೃತ್ಯ ಇಂತಹ ಕೃತ್ಯವನ್ನು ನಾವೆಂದೂ ಕಂಡಿಲ್ಲ ಎಂದರು.

ಈ ಕೃತ್ಯದ ಸಲುವಾಗಿ ಕಾರಣಿಗಳು ಪೊಲೀಸರಿಗೆ ಒಬ್ಬನನ್ನು ಬಂಧಿಸಲು ಸೂಚನೆ ನೀಡಿದ್ದಾರೆ. ಈಗ ಪೊಲೀಸರು ರಾಜಕಾರಣಿಗಳ ಆಜ್ಞೆಯಂತೆ  ಆತನಬನ್ಈನು ಬಂಧಿಸಿ ಈತ ಕುಡಿದು ಆ ಕೃತ್ಯ ಮಾಡಿದ್ದಾನೆ ಎಂದಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಇಂತಹ ಮನಸ್ಸು ಬಂದಿದ್ದು ತುಂಬಾ ನೋವುಂಟು ಮಾಡಿದೆ. ಇದು ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ರಾಜ್ಯಕ್ಕೆ ಅಪಮಾನ. ಆತ ಹುಚ್ಚನಾಗಿದ್ದಾರೆ 3 ಹಸುವಿನ ಕೆಚ್ಚಲನ್ನು ಕೊಯ್ಯುವ ಬುದ್ಧಿ ಆತನಿಗೆ ಎಲ್ಲಿಂದ ಬಂತು. ಆತ ಬೆಳಿಗ್ಗೆ ಕುಡಿದು ಹೋಗಿದ್ದರೆ ಅಷ್ಟು ಬೆಳಿಗ್ಗೆ ಯಾವ ಬಾರ್ ತೆಗೆದಿತ್ತು ಎಂದು ಪ್ರಶ್ನಿಸಿದರು. ಹಾಗೆಯೇ ಅದರ ಪಾಪವನ್ನು ಪೊಲೀಸ್ ಇಲಾಖೆಯ  ಕುಟುಂಬದವರು ಸಹ ಅನುಭವಿಸುತ್ತಾರೆ. ಇಂತಹದ್ದೆ ಕೃತ್ಯವೇನಾದರು ಮುಸ್ಲಿಮರ ಸಮುದಾಯದಲ್ಲಿ ಆಗಿದ್ದರೆ ಇಷ್ಟೋತ್ತಿಗೆ ಅವರು ಬೆಂಕಿ ಹಚ್ಚಿ ಬಿಡುತ್ತಿದ್ದರು. ಆ ಕೃತ್ಯ ಎಸಗಿದ ದುಷ್ಟನೊಂದಿಗೆ ಇನ್ನು ಎಷ್ಟು ಜನ ಇದ್ದಾರೆ ಎಂಬುದನ್ನು ಪೊಲೀಸರು ತಿಳಿದುಕೊಳ್ಳಬೇಕು ಹಾಗೆಯೇ ರಾಷ್ಟ್ರದ್ರೋಹಿ ಗುಂಪನ್ನು ಹುಡುಕಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಭಗವಾನ್‌ ಒಬ್ಬ ಅಯೋಗ್ಯ 

ಹಿಂದೂಗಳ ಬಗ್ಗೆ ಮಾತನಾಡುತ್ತಿರುವ ಭಗವನ್‌ ಒಬ್ಬ ಅಯೋಗ್ಯ. ಅವರ ಅಪ್ಪ ಅಮ್ಮನಿಗೆ ತಿಳಿದಿರಲಿಲ್ಲ ಈತ ದೊಡ್ಡವನಾದ ಮೇಲೆ ಆಯೋಗ್ಯನಾಗುತ್ತಾನೆಂದು ಆದ್ದರಿಂದ ಆತನಿಗೆ ಭಗವಾನ್ ಎಂದು ಹೆಸರಿಟ್ಟಿದ್ದಾರೆ. ಆತ ಹೀಗೆ ಆಗ್ತಾನೆ ಎಂದು ಅವರಿಗೆ ಮೊದಲೇ ಗೊತ್ತಿದ್ದರೆ ಅವರು ಈ ಆಯೋಗ್ಯನಿಗೆ ಇಂತಹ ಹೆಸರು ಇಡುತ್ತಿರಲಿಲ್ಲ ಎಂದು ಹಿಂದೂ ಧರ್ಮದ ವಿರುದ್ದ ಮಾತನಾಡಿದ ಪ್ರೋ ಭಗವಾನ್‌ ವಿರುದ್ದ ಕಿಡಿಕಾರಿದರು.

 

SUMMARY | Former Deputy CM Eshwarappa attacked the Congress government, saying the congress government in the state will not remain in power for long.

 

KEYWORDS |  Eshwarappa, congress government, politics,

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು