ಪೊಲೀಸ್ ಇಲಾಖೆ ವಿರುದ್ಧ ಕೆರಳಿದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ | ಸಿಟಿ ರವಿ ಬಗ್ಗೆ ಹೇಳಿದ್ದೇನು?
Deputy CM KS Eshwarappa
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 23, 2024
ಶಿವಮೊಗ್ಗ | ಮುಂದೆ ಸಿ.ಟಿ ರವಿ ರಾಜ್ಯದ ಗೃಹಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗಬಹುದು. ಆಗ ಪೊಲೀಸರು ಹೋಗಿ ಸಿ.ಟಿ ರವಿಯವರ ಬೂಟನ್ನು ನೆಕ್ಕುತ್ತಾರಾ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಪೊಲೀಸರ ವಿರುದ್ದ ವಾಗ್ದಾಳಿ ನಡೆಸಿದರು.
ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿ.ಟಿ ರವಿಯವರ ಬಂಧನ ವಿಚಾರವಾಗಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಶಬ್ದಗಳನ್ನು ಬಳಸಿದ್ದರು ಎಂಬುದಾಗಿ ಪೊಲೀಸರು ಅವರನ್ನು ಬಂದಿಸಿದ್ದರು. ಆ ಸಮಯದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆ ಆಯಿತು ನಾವೆಲ್ಲ ಆ ದೃಶ್ಯವನ್ನು ಟಿವಿಯಲ್ಲಿ ನೋಡಿದೆವು. ಗೇಟ್ ಅನ್ನು ಒದ್ದು ರವಿ ಮೇಲೆ ಹಲ್ಲೆ ಮಾಡಿರುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಆದರೆ ಆ ವಿಚಾರವಾಗಿ ಸಿಟಿ ರವಿಯವರು ಕಂಪ್ಲೇಂಟ್ ಕೊವುವವರೆಗೂ ಪೊಲೀಸರು ಯಾವ ಆರೋಪಿಯನ್ನು ಬಂಧಿಸಿರಲಿಲ್ಲ. ರವಿಯವರು ಕಂಪ್ಲೇಂಟ್ ಕೊಟ್ಟ ನಂತರ ಪೊಲೀಸರು 10 ಜನರನ್ನ ಒಳಗೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ವಯಕ್ತಿಕ ಅನುಭವದಿಂದ ಒಂದು ಪ್ರಶ್ನೆಯನ್ನು ಕಾನೂನು ತಜ್ಞರು ಹಾಗೂ ಸರ್ಕಾರದ ಮುಂದೆ ಇಡುತ್ತಿದ್ದೇನೆ. ಅದೇನೆಂದರೆ ಈ ವಿಚಾರವಾಗಿ ಸಿಟಿ ರವಿ ಅವರನ್ನು ಅರೆಸ್ಟ್ ಮಾಡಿದ್ದು ಯಾಕೆ ಊರೆಲ್ಲಾ ಸುತ್ತಿಸಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಗೃಹ ಸಚಿವರು ಸಿ ಟಿ ರವಿ ಅವರನ್ನುಅರೆಸ್ಟ್ ಮಾಡಿದ್ದು ನಮಗೆ ಗೊತ್ತಿಲ್ಲ ಎನ್ನುತ್ತಾರೆ. ಹಾಗಾದರೆ ಪೊಲೀಸರಿಗೆ ಸಿಟಿ ರವಿಯನ್ನು ಅರೆಸ್ಟ್ ಮಾಡಲು ಹೇಳಿದ್ದು ಯಾರು. ಇದರಿಂದ ಗೊತ್ತಾಗುತ್ತೆ ಕರ್ನಾಟಕವೂ, ಪೋಲಿಸ್ ಗೂಂಡಾ ರಾಜ್ಯ ಆಗುತ್ತಿದೆ ಎಂದು ಪೊಲೀಸರ ವಿರುದ್ದ ಹರಿಹಾಯ್ದರು.
ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳು ಯಾರೋ ಪ್ರಭಾವಿಗಳ ಸೂಚನೆಯ ಮೇರೆಗೆ ಇಂತಹ ಕೃತ್ಯಗಳನ್ನ ನಡೆಸುತ್ತಿದ್ದಾರೆ. ಅವರಿಗೆ ಆ ರೀತಿ ಮಾಡಲು ಸೂಚನೆ ಕೊಟ್ಟ ಪ್ರಬಾವಿ ರಾಜಕಾರಣಿ ಯಾರು ಎಂಬುದರ ಬಗ್ಗೆ ರಾಜ್ಯಸರ್ಕಾರ ತನಿಖೆ ನಡೆಸಬೇಕು. ಮುಂದೆ ಸಿ.ಟಿ ರವಿ ರಾಜ್ಯದ ಗೃಹಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಗಬಹುದು. ಆಗ ಪೊಲೀಸರು ಹೋಗಿ ಸಿ.ಟಿ ರವಿಯವರ ...........ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಪಡಿಸಿದರು.
ಬಹಳ ಪವಿತ್ರವಾದ ಪೀಠ ಸಭಾಪತಿ ಪೀಠ. ಇಂದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಸಭಾಪತಿ ಪೀಠಕ್ಕೆ ಅಗೌರವ ಆಗಿರೋದು ದುಃಖದ ಸಂಗತಿ. ಸಭಾಪತಿ ಅನುಮತಿ ಪಡೆಯದೆ ವಿಧಾನಪರಿಷತ್ ಸದಸ್ಯರ ವಿರುದ್ಧ ಎಫ್ಐಆರ್ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಕಪಾಳ ಮೋಕ್ಷ ಆದ ನಂತರ ಸಿಟಿ ರವಿ ಅವರನ್ನ ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ.
ಸಿ.ಟಿ ರವಿ ಅಸಭ್ಯ ಪದವನ್ನ ಬಳಸಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಸಿಟಿರವಿ ನಾನು ಆವಾಚ್ಯ ಶಬ್ದ ಬಳಸಿಲ್ಲ ಎಂದಿದ್ದಾರೆ. ಮೇಲಾಗಿ ಸಭಾಪತಿ ಬಸವರಾಜ ಹೊರಟ್ಟಿ ಆ ರೀತಿ ಪದವನ್ನು ಸಿಟಿ ರವಿ ಬಳಸಿಲ್ಲ ಎಂದು ಸಭಾಪತಿ ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ ಸಿಟಿರವಿಯವರಿಗೆ ಆಗಿರುವ ಅವಮಾನದ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಏನು ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕು. ಈ ಕೃತ್ಯದಿಂದ ಕಾಂಗ್ರೆಸಿನ ನಾಯಕರು ಸಭಾಪತಿ ಪೀಠಕ್ಕೆ ಚ್ಯುತಿ ತಂದಿದ್ದಾರೆ. ಆಕಸ್ಮಾತ್ ಅಲ್ಲೇ ರವಿಯವರ ಕೊಲೆಯಾಗಿದ್ದಾರೆ ಏನು ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ನೀಡಿದ ಹೇಳಿಕೆ ಬಗ್ಗೆ ಕಾನೂನು ನೋಡಿಕೊಳ್ಳುತ್ತೆ. ಅದರ ಬಗ್ಗೆ ತನಿಖೆ ನಡೆದು ಸತ್ಯಾ ಸತ್ಯತೆ ಹೊರಬರಲಿ ಎಂದರು.
ಪೊಲೀಸರು ಯಾರ ಗುಲಾಮರಾಗಿಯೂ ಕೆಲಸ ಮಾಡಬಾರದು
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ವಿಶ್ವಾಸ್ ಮೇಲೆ ಪೊಲೀಸರು ಯಾವುದೋ ಕಾರಣಕ್ಕೆ ಸುಳ್ಳು ಕೇಸ್ ಹಾಕಿದ್ದಾರೆ. ಅವರ ಮೇಲೆ ನಾನ್ ಬೆಲೆಬಲ್ ವಾರಂಟ್ ಆಗಿದೆ. ನಾನು ಈ ಹಿಂದೆ ಬಾಂಗ್ಲಾದೇಶದ ವಿಚಾರ ಮಾತನಾಡಿದ್ದೆ. ನಾನು ಬಾಂಗ್ಲಾ ದೇಶದ ಮುಸ್ಲಿಮರ ವಿರುದ್ದ ಮಾತನಾಡಿದರೆ ಇಲ್ಲಿನ ಪೊಲೀಸರಿಗೆ ಯಾಕೆ ಸಿಟ್ಟು ಬರುತ್ತೋ ಗೊತ್ತಿಲ್ಲ ನನ್ನ ಮೇಲೂ 2 ಸುಮೂಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಯಾರ ಪ್ರಭಾವ ಇದೆ ಗೊತ್ತಿಲ್ಲ ಪೊಲೀಸರು ಯಾರ ಗುಲಾಮರಾಗಿಯೂ ಕೆಲಸ ಮಾಡಬಾರದು ಎಂದರು.
SUMMARY | Ct Ravi may become the home minister or deputy chief minister of the state. Former Deputy CM KS Eshwarappa attacked the police, saying that the police would then go and lick the shoes of CT Ravi.
KEYWORDS | Ct Ravi, home minister, KS Eshwarappa, politics,